ವಿಶ್ವ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು ಸೆಮಿ ಫೈನಲ್‌ಗೆ

Update: 2018-08-03 16:56 GMT

ನಾನ್‌ಜಿಂಗ್, ಆ.3:ಹಾಲಿ ಚಾಂಪಿಯನ್ ನೊರೊಮಿ ಒಕುಹರಾರನ್ನು 21-17, 21-19 ಗೇಮ್‌ಗಳ ಅಂತರದಿಂದ ಮಣಿಸಿದ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ಆಟಗಾರ್ತಿಯನ್ನು ಮಣಿಸಿದ ಸಿಂಧು ಶನಿವಾರ ನಡೆಯುವ ಸೆಮಿ ಫೈನಲ್‌ನಲ್ಲಿ ಜಪಾನ್‌ನ ಇನ್ನೋರ್ವ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.

ಈ ಗೆಲುವಿನೊಂದಿಗೆ ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಪದಕವನ್ನು ದೃಢಪಡಿಸಿದರು. ಹೈದರಾಬಾದ್ ಆಟಗಾರ್ತಿ ಈಗಾಗಲೇ 2 ಕಂಚು ಹಾಗೂ ಒಂದು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಸತತ ಎರಡನೇ ಬಾರಿ ಸೆಮಿ ಫೈನಲ್‌ಗೆ ತಲುಪಿರುವ ಸಿಂಧು ಕಳೆದ ವರ್ಷ ಫೈನಲ್‌ನಲ್ಲಿ ಒಕುಹರಾಗೆ ಸೋತು ಪ್ರಶಸ್ತಿ ವಂಚಿತರಾಗಿದ್ದರು.

ಸೈನಾ ಹಾಗೂ ಪ್ರಣೀತ್ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ ಕಾರಣ ಸಿಂಧು ಟೂರ್ನಿಯಲ್ಲಿರುವ ಭಾರತದ ಏಕೈಕ ಆಶಾಕಿರಣವಾಗಿದ್ದಾರೆ.

ಪ್ರಣೀತ್‌ಗೆ ಸೋಲು: ಇದೇ ವೇಳೆ, ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾಯಿ ಪ್ರಣೀತ್ ಜಪಾನ್‌ನ 6ನೇ ಶ್ರೇಯಾಂಕದ ಆಟಗಾರ ಕೆಂಟೊ ಮೊಮೊಟೊ ವಿರುದ್ಧ 12-21, 12-21 ಅಂತರದಿಂದ ಸೋಲುವುದರೊಂದಿಗೆ ಕೂಟದಿಂದ ಹೊರ ನಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News