ಉಡುಪಿ: ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ
ಉಡುಪಿ, ಆ.4: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ವತಿಯಿಂದ 2016-18ನೇ ಸಾಲಿನ ರಾಜ್ಯ ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಆದಿಉಡುಪಿ, ಉಡುಪಿ ಮತ್ತು ಕುಕ್ಕಿಕಟ್ಟೆ ಕೇಂದ್ರಗಳಲ್ಲಿ ನಡೆದ ಕಾರ್ಯಕ್ರಮ ದಲ್ಲಿ ರಾಜ್ಯ ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಸಬೀನಾ ಮುಹಮ್ಮದ್ ಸುಹೈಲ್ ಮತ್ತು ಸಾದಿಯಾ ತಸ್ನೀಮ್ ಅವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಾಲಿಹಾತ್ ಪದವಿ ಕಾಲೇಜಿನ ಪ್ರಾಂಶುಪಾಲೆ ಸಬೀನಾ, ರಂಗ ಕಲಾವಿದೆ ಭಾರತಿ ಟಿ.ಕೆ., ಜಮಾಅತೆ ಇಸ್ಲಾಮೀ ಹಿಂದ್‌ನ ಮಹಿಳಾ ವಿಭಾಗದ ರಾಜ್ಯ ಹೊಣೆಗಾರರಾದ ಕುಲ್ಸೂಮ್ ಅಬೂಬಕರ್, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಕರ್ನಾಟಕ ರಾಜ್ಯಾಧ್ಯಕ್ಷೆ ನವಿದಾ ಹುಸೈನ್ ಅಸಾದಿ, ಕಾರ್ಕಳ ಜಮಾಅತೆ ಇಸ್ಲಾಮಿಯ ಸಂಚಾಲಕಿ ರೇಷ್ಮಾ ಬೈಲೂರು ಭಾಗವಹಿಸಿದ್ದರು. ವೇದಿಕೆಯಲ್ಲಿ ಸ್ಥಾನೀಯ ಹೊಣೆಗಾರರಾದ ಶಾಹಿದಾ ರಿಯಾಝ್, ಸಮೀನಾ ಶುಕೂರ್ ಮೊದಲಾದವರು ಉಪಸ್ಥಿತರಿದ್ದರು.