ಸ್ನೇಹಿತೆಯರೊಂದಿಗೆ ಫ್ರೆಂಡ್‌ಶಿಪ್ ಡೇ ಆಚರಿಸಿದ ಸೋನಾಲಿ ಬೇಂದ್ರೆ

Update: 2018-08-05 09:03 GMT

ಹೊಸದಿಲ್ಲಿ, ಆ.5: ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್‌ನ ಖ್ಯಾತ ನಟಿ ಸೋನಾಲಿ ಬೇಂದ್ರೆಯವರನ್ನು ಆತ್ಮೀಯ ಸ್ನೇಹಿತೆಯರಾದ ಸುಸ್ಸಾನೆ ಖಾನ್ ಹಾಗೂ ಗಾಯತ್ರಿ ಜೋಶಿ ಭೇಟಿಯಾದಾಗ ಫ್ರೆಂಡ್‌ಶಿಪ್ ಡೇ ಆಚರಿಸದೇ ಇರಲು ಅವರಿಗೆ ಬೇರೆ ಕಾರಣಗಳೇ ಇರಲಿಲ್ಲ.

‘‘ಇಂದಿನ ದಿನಗಳಲ್ಲಿ ನನಗೆ ರೆಡಿಯಾಗಲು ಹೆಚ್ಚು ಸಮಯ ಬೇಕಾಗುತ್ತಿಲ್ಲ. ಏಕೆಂದರೆ ತಲೆಕೂದಲು ಬಾಚಿಕೊಳ್ಳುವ ಅವಶ್ಯಕತೆ ನನಗಿಲ್ಲ’’ ಎಂದು ಬೊಕ್ಕತಲೆಯ ಸೋನಾಲಿ ತನ್ನ ಸ್ನೇಹಿತೆಯರೊಂದಿಗೆ ತೆಗೆಸಿಕೊಂಡ ಫೋಟೊವನ್ನು ಹೊಸ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಟ್ವೀಟ್ ಮಾಡಿದ್ದಾರೆ.

ಸೋನಾಲಿ ಪ್ರಸ್ತುತ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದು ಈಗ ಕೆಮೊಥೆರಪಿ ಚಿಕಿತ್ಸೆ ಆರಂಭವಾಗಿದೆ. 43ರ ಹರೆಯದ ಬೇಂದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳು ಹಾಗೂ ಹಿತೈಷಿಗಳ ಸಂಪರ್ಕದಲ್ಲಿದ್ದಾರೆ.

  ‘‘ಫ್ರೆಂಡ್‌ಶಿಪ್ ಡೇನಲ್ಲಿ ನನ್ನೊಂದಿಗೆ ಸಮಯ ಕಳೆಯಲು ಸುಸ್ಸಾನೆ ಹಾಗೂ ಗಾಯತ್ರಿ ನ್ಯೂಯಾರ್ಕ್‌ಗೆ ಬಂದಿದ್ದಾರೆ. ನನ್ನ ಸ್ನೇಹಿತರಿಗೆ ನಾನು ಋಣಿಯಾಗಿರುವೆ. ಅವರೇ ನನ್ನ ಶಕ್ತಿಯ ಆಧಾರಸ್ತಂಭಗಳಾಗಿದ್ದಾರೆ. ಸ್ನೇಹಿತರು ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ಸಮಯ ಮಾಡಿಕೊಂಡು ದೂರವಾಣಿ ಕರೆ, ಮೆಸೇಜ್, ಫೇಸ್‌ಟೈಮ್ ಮೂಲಕ ಭೇಟಿಯಾಗಿದ್ದಾರೆ. ಈ ಮೂಲಕ ನನ್ನನ್ನು ಒಂಟಿಯಾಗಿಸದೇ ನೋಡಿಕೊಂಡಿದ್ದಾರೆ. ನನಗೆ ನಿಜವಾದ ಸ್ನೇಹವನ್ನು ತೋರ್ಪಡಿಸಿದವರಿಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಬೇಂದ್ರೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News