ಉ.ಪ್ರದೇಶ: ಆಶ್ರಮದ 19 ಮಹಿಳೆಯರು ನಾಪತ್ತೆ

Update: 2018-08-08 04:43 GMT

ಲಕ್ನೊ, ಆ.8: ಉತ್ತರಪ್ರದೇಶದ ಹರ್ದೋಯಿ ಎಂಬಲ್ಲಿರುವ ಆಶ್ರಮದಲ್ಲಿದ್ದ 19 ಮಹಿಳೆಯರು ನಾಪತ್ತೆಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹರ್ದೋಯಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪುಲ್ಕಿತ್ ಖರೆ ಮಂಗಳವಾರ ಈ ಆಶ್ರಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದಾಗ ಆಶ್ರಮದಲ್ಲಿ ಕೇವಲ ಇಬ್ಬರು ಮಹಿಳೆಯರಿದ್ದರು. ಆದರೆ ಅಲ್ಲಿದ್ದ ನೋಂದಣಿ ಪುಸ್ತಕದಲ್ಲಿ 21 ಮಹಿಳೆಯರಿದ್ದಾರೆ ಎಂದು ನಮೂದಿಸಲಾಗಿದೆ. ಈ ಬಗ್ಗೆ ಆಶ್ರಮದ ಅಧೀಕ್ಷಕರನ್ನು ಕೇಳಿದಾಗ ಅವರಿಂದ ಸಮರ್ಪಕ ಉತ್ತರ ಬಂದಿಲ್ಲ. ನಿರಾಶ್ರಿತ ಮಹಿಳೆಯರಿಗಾಗಿದ್ದ ಈ ಆಶ್ರಮದ ಉಸ್ತುವಾರಿಯನ್ನು ಆಯೇಷ ಗ್ರಾಮ ಕೈಗಾರಿಕೆ ಸಮಿತಿ ನಿರ್ವಹಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News