ಸೌದಿ ಅರೇಬಿಯಾ ಜೊತೆಗಿನ ಬಿಕ್ಕಟ್ಟು ಪರಿಹಾರ: ಯುಎಇ, ಬ್ರಿಟನ್ ಸಹಕಾರ ಕೋರಲು ಕೆನಡಾ ಚಿಂತನೆ

Update: 2018-08-08 16:42 GMT

ರಿಯಾದ್, ಆ.8: ಸೌದಿ ಅರೇಬಿಯಾ ದೇಶದೊಂದಿಗಿನ ರಾಜತಾಂತ್ರಿಕ ವಿವಾದದ ತೀವ್ರತೆಯನ್ನು ತಗ್ಗಿಸುವ ಪ್ರಯತ್ನವಾಗಿ ಯುಎಇ ಹಾಗೂ ಬ್ರಿಟನ್‌ಗಳ ನೆರವು ಪಡೆಯಲು ಕೆನಡಾ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಕೆನಡಾದ ಗೋಧಿ ಹಾಗೂ ಬಾರ್ಲಿಯನ್ನು ಖರೀದಿಸದಿರಲು ಸೌದಿ ಅರೇಬಿಯಾದ ಪ್ರಮುಖ ಗೋಧಿ ಖರೀದಿ ಸಂಸ್ಥೆ ನಿರ್ಧರಿಸಿದೆ ಎಂದು ಮಂಗಳವಾರ ವರದಿಯಾಗಿತ್ತು.

ಸೌದಿ ಅರೇಬಿಯಾದ ಸಾಮಾಜಿಕ ಕಾರ್ಯಕರ್ತರನ್ನು ಕೆನಡಾ ಸರಕಾರ ಬಂಧಿಸಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ಮಧ್ಯೆ ಬಿಕ್ಕಟ್ಟು ಮೂಡಿದೆ. ಸಾಮಾಜಿಕ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲು ಆಗ್ರಹಿಸಿದ್ದ ಸೌದಿ ಸರಕಾರ ಕೆನಡಾದಲ್ಲಿದ್ದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು ಹಾಗೂ ಸೌದಿಯಲ್ಲಿದ್ದ ಕೆನಡಾದ ರಾಯಭಾರಿಯನ್ನು ವಾಪಸು ಕಳಿಸಿತ್ತು. ದೇಶದ ಆಂತರಿಕ ವ್ಯವಹಾರದಲ್ಲಿ ಕೆನಡಾ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆಕ್ಷೇಪಿಸಿ ಆ ದೇಶದೊಂದಿಗೆ ಹೊಸ ವ್ಯಾಪಾರ ಸಂಬಂಧದ ಮೇಲೆ ನಿರ್ಬಂಧ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ತೀವ್ರತೆಯನ್ನು ಶಮನಗೊಳಿಸಲು ಮುಂದಾಗಿರುವ ಕೆನಡಾ ತನ್ನ ಮಿತ್ರದೇಶಗಳಾದ ಯುಎಇ ಹಾಗೂ ಬ್ರಿಟನ್ ನೆರವು ಪಡೆಯಲು ಮುಂದಾಗಿದೆ ಎಂದು ಕೆನಡಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂಯಮ ವಹಿಸುವಂತೆ ಬ್ರಿಟನ್ ಮಂಗಳವಾರ ಕೆನಡಾ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ಸಲಹೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News