ಏಸು ಗೀತೆ ಹಾಡಿದ ಗಾಯಕರಿಗೆ ಸಂಘಪರಿವಾರ ಸಂಘಟನೆಯಿಂದ ಬೆದರಿಕೆ

Update: 2018-08-10 18:44 GMT

ಚೆನ್ನೈ, ಆ. 10: ಏಸುವನ್ನು ಪ್ರಶಂಸಿಸಿದ ಹಾಡು ಹಾಡಿರುವುದಕ್ಕೆ ನಾಲ್ವರು ಪ್ರಮುಖ ಕರ್ನಾಟಿಕ ಹಾಡುಗಾರರಿಗೆ ಸಂಘಪರಿವಾರ ಬೆದರಿಕೆ ಒಡ್ಡಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ಸಂಗೀತಗಾರ ಟಿ.ಎಂ. ಕೃಷ್ಣಾ, ತಾನು ಪ್ರತಿ ತಿಂಗಳಿಗೆ ಒಂದರಂತೆ ಏಸು ಅಥವಾ ಅಲ್ಲಾಹ್‌ನ ಹಾಡು ಹಾಡುವುದಾಗಿ ಘೋಷಿಸಿದ್ದಾರೆ. ಏಸುವಿನ ಕುರಿತು ಹಾಡು ಹಾಡಿರುವುದಕ್ಕೆ ಅರುಣಾ ಸೈರಮ್, ನಿತ್ಯಶ್ರೀ ಮಾಧೇವನ್, ಒ.ಎಸ್. ಅರುಣ್ ಹಾಗೂ ಪಿ. ಉಣ್ಣಿ ಕೃಷ್ಣನ್ ಅವರನ್ನು ಗುರಿಯಾಗಿರಿಸಿ ಸಮಾಜಿಕ ಜಾಲ ತಾಣದಲ್ಲಿ ಬೆದರಿಕೆ ಒಡ್ಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಅರುಣಾ ಕ್ರಿಶ್ಚಿಯನ್ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ರದ್ದುಗೊಳಿಸಿದ್ದಾರೆ. ತಾನು ಇನ್ನು ಮುಂದೆ ಹಿಂದೂಯೇತರ ದೇವರ ಕುರಿತು ಎಂದಿಗೂ ಹಾಡುವುದಿಲ್ಲ ಎಂದು ನಿತ್ಯಶ್ರೀ ಹೇಳಿದ್ದಾರೆ.

ರಾಷ್ಟ್ರೀಯ ಸನಾತನ ಸೇವಾ ಸಂಘಂ (ಆರ್‌ಎಸ್‌ಎಸ್‌ಎಸ್) ಸ್ಥಾಪಕ ಎಸ್. ರಾಮನಾಥನ್ ಹಾಗೂ ಅರುಣಾ ಅವರ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಬಳಿಕ ಈ ವಿವಾದ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News