ಇಮ್ರಾನ್‌ಖಾನ್ ಪದಗ್ರಹಣ ಸಮಾರಂಭಕ್ಕೆ ಕಪಿಲ್, ಗವಾಸ್ಕರ್, ಸಿಧುಗೆ ಆಹ್ವಾನ

Update: 2018-08-11 06:46 GMT

ಕರಾಚಿ, ಆ.11: ಇಮ್ರಾನ್ ಖಾನ್ ಅವರು ಆ.18 ರಂದು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಸಮಾರಂಭಕ್ಕೆ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ)ಭಾರತದ ಕೆಲವು ಗಣ್ಯರುಗಳನ್ನು ಆಹ್ವಾನಿಸಲು ನಿರ್ಧರಿಸಿದೆ ಎಂದು ಪಿಟಿಐ ಪಕ್ಷದ ಹಿರಿಯ ನಾಯಕ ಶುಕ್ರವಾರ ತಿಳಿಸಿದ್ದಾರೆ.

 ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಹಾಜರಾಗಲು ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ ಭಾರತದ ಕ್ರಿಕೆಟಿಗರಾದ ಕಪಿಲ್‌ದೇವ್, ನವಜೋತ್ ಸಿಂಗ್ ಸಿಧು ಹಾಗೂ ಸುನೀಲ್ ಗವಾಸ್ಕರ್‌ಗೆ ಆಹ್ವಾನ ನೀಡಿದೆ ಎಂದು ಹಿರಿಯ ಸೆನೆಟರ್ ಫೈಸಲ್ ಜಾವೆದ್ ಟ್ವೀಟ್ ಮಾಡಿದ್ದಾರೆ.

ಇಮ್ರಾನ್ ಖಾನ್ ಸರಳ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸದಿರಲು ನಿರ್ಧರಿಸಿದ್ದಾರೆ ಎಂದು ಕಳೆದ ವಾರ ವರದಿಯಾಗಿತ್ತು.

 ಪಿಟಿಐ ಪಕ್ಷ ಈ ಮೊದಲು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಹಾಗೂ ಭಾರತ ಕ್ರಿಕೆಟಿಗರಾದ ಕಪಿಲ್‌ದೇವ್, ಸುನೀಲ್ ಗವಾಸ್ಕರ್ ಹಾಗೂ ನವಜೋತ್ ಸಿಂಗ್ ಸಿಧು ಸಹಿತ ಹಲವು ವಿದೇಶೀ ಗಣ್ಯರುಗಳನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿತ್ತು. ಆದರೆ, ಮತ್ತೆ ತನ್ನ ಮನಸ್ಸನ್ನು ಬದಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News