ಪೂಣಚ್ಚಗೆ ಚೊಚ್ಚಲ ಪ್ರಶಸ್ತಿ

Update: 2018-08-12 18:33 GMT

ಪುಣೆ, ಆ.12: ಇಂಡೋನೇಶ್ಯದ ಜಕಾರ್ತಾದಲ್ಲಿ ನಡೆಯುತ್ತಿರುವ ಟೆನಿಸ್ ಟೂರ್ನಿಯಲ್ಲಿ ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸಿದ ಭಾರತದ ನಿಕಿ ಕಲಿಯಂಡ ಪೂಣಚ್ಚ ತಮ್ಮ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಅರ್ಹತಾ ಸುತ್ತಿನಿಂದ ಗೆದ್ದು ಬಂದಿದ್ದ 23ರ ಹರೆಯದ ಭಾರತದ ಆಟಗಾರ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮೈಕೆಲ್ ಲೂಕ್‌ರನ್ನು 6-3, 6-1 ನೇರ ಸೆಟ್‌ಗಳಲ್ಲಿ ಸೋಲಿಸಿದರು. ಇದರೊಂದಿಗೆ 27 ರ್ಯಾಂಕಿಂಗ್ ಅಂಕ ಹಾಗೂ ಸುಮಾರು 2.5 ಲಕ್ಷ ರೂಪಾಯಿ ಬಹುಮಾನ ಮೊತ್ತವನ್ನು ಪೂಣಚ್ಚ ಪಡೆದರು. ಪೂಣಚ್ಚ 2014-15ರಲ್ಲಿ ರಾಮಕುಮಾರ್ ರಾಮನಾಥನ್ ಜೊತೆಗೂಡಿ ಮೂರು ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು. ಬಳಿಕ ಕಿಬ್ಬೊಟ್ಟೆಗೆ ಆದ ಗಾಯದಿಂದ ಕೆಲ ಸಮಯ ಹೊರಗುಳಿದಿದ್ದರು. ಈ ವರ್ಷದ ಜನವರಿಯಲ್ಲಿ ಬೆಂಗಳೂರಿನಲ್ಲಿರುವ ರೋಹನ್ ಬೋಪಣ್ಣ ಟೆನಿಸ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News