ಉಮರ್ ಖಾಲಿದ್ ಮೇಲೆ ವಿಫಲ ದಾಳಿ ನಡೆಸಿದ ವ್ಯಕ್ತಿ ಸಿಸಿಟಿವಿಯಲ್ಲಿ ಸೆರೆ

Update: 2018-08-14 08:48 GMT

ಹೊಸದಿಲ್ಲಿ, ಆ. 14: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಸೋಮವಾರ ದಾಳಿ ನಡೆಸಿದವನೆನ್ನಲಾದ ವ್ಯಕ್ತಿಯ ಚಿತ್ರಣಗಳು ಸಿಸಿಟಿವಿ ದಾಖಲೆಗಳಲ್ಲಿ ಲಭ್ಯವಾಗಿದ್ದು, ಆತ ಸ್ಥಳದಿಂದ ಪರಾರಿಯಾಗುತ್ತಿರುವುದು ಕಾಣಿಸುತ್ತದೆ.

ಸಂಸದ್ ಮಾರ್ಗ್ ನಲ್ಲಿರುವ ವಿಠಲ್ ಭಾಯಿ ಪಟೇಲ್ ಹೌಸ್ ಸಮೀಪವಿರುವ ಸಿಸಿಟಿವಿಯಿಂದ ಈ ದೃಶ್ಯ ದೊರಕಿದೆ. ಘಟನೆಯಲ್ಲಿ ಉಮರ್ ಖಾಲಿದ್ ಅವರು ಅಪಾಯವಿಲ್ಲದೆ ಪಾರಾಗಿದ್ದು, ದುಷ್ಕರ್ಮಿ ಪರಾರಿಯಾಗುವ ಭರದಲ್ಲಿ ತನ್ನ ಕೈಯ್ಯಲ್ಲಿದ್ದ ಪಿಸ್ತೂಲನ್ನು ಅಲ್ಲಿಯೇ ನೆಲಕ್ಕೆಸೆದಿದ್ದಾನೆ.

2016ರಲ್ಲಿ ಜೆಎನ್‌ಯುವಿನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದರೆಂಬ ಆರೋಪದ ಮೇಲೆ ಬಂಧಿತರಾದವರಲ್ಲಿ ಖಾಲಿದ್ ಕೂಡ ಒಬ್ಬರಾಗಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.

ಸೋಮವಾರ ಅವರು ರಾಜಧಾನಿಯ ಕಾನ್‌ಸ್ಟಿಟ್ಯೂಶನ್ ಕ್ಲಬ್ ನಲ್ಲಿ ನಡೆಯಲಿದ್ದ 'ಖೌಫ್ಫ್ ಸೆ ಆಜಾದಿ' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದಾಗ ಈ ಘಟನೆ ನಡೆದಿದೆ. ಅಲ್ಲಿಯ ಟೀ ಸ್ಟಾಲ್ ನಲ್ಲಿ ಚಹಾ ಸೇವಿಸಲೆಂದು ಅವರು ತಮ್ಮ ಸ್ನೇಹಿತರ ಜತೆ ಬಂದಿದ್ದಾಗ ಹಿಂದಿನಿಂದ ಬಂದ ಒಬ್ಬ ವ್ಯಕ್ತಿ ಅವರನ್ನು ದೂಡಿ ಅವರತ್ತ ಗುಂಡು ಹಾರಿಸಲು ಯತ್ನಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News