×
Ad

ಮಹಾದಾಯಿ ತೀರ್ಪು ಸ್ವಲ್ಪ ಸಮಾಧಾನ ತಂದಿದೆ: ಎಂ.ಬಿ.ಪಾಟೀಲ್

Update: 2018-08-14 22:01 IST

ಬೆಂಗಳೂರು, ಆ.14: ಮಹಾದಾಯಿ ಜಲ ವಿವಾದ ಕುರಿತು ನ್ಯಾಯಾಧೀಕರಣ ನೀಡಿರುವ ತೀರ್ಪು ಸ್ವಲ್ಪ ಸಮಾಧಾನ ತಂದಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಸಾ-ಬಂಡೂರಿ ಎರಡೂ ಸೇರಿ ನಾವು ಕೇಳಿದ್ದು 7.56 ಟಿಎಂಸಿ ನೀರು. ಖಾನಾಪುರ ಭಾಗಕ್ಕೆ ಒಂದೂವರೆ ಟಿಎಂಸಿ ನೀರು ಕೊಟ್ಟಿದ್ದಾರೆ. ಇನ್ನೂ ಮೂರುವರೆ ಟಿಎಂಸಿ ನೀರು ಕೊಟ್ಟಿದ್ದರೆ ನಮಗೆ ಖುಷಿಯಾಗುತ್ತಿತ್ತು ಎಂದರು.

ಗೋವಾ ಮಾಡಿದ್ದ ಆರೋಪಕ್ಕೆ ವಿರುದ್ಧವಾಗಿ ತೀರ್ಪು ಪ್ರಕಟವಾಗಿದೆ. ಇನ್ನೂ ಮೂರರಿಂದ ಮೂರುವರೆ ಟಿಎಂಸಿ ನೀರನ್ನು ಹೇಗೆ ಪಡೆಯಬೇಕು ಅಂತಾ ಕಾನೂನಾತ್ಮಕವಾಗಿ ಚರ್ಚೆ ಮಾಡುತ್ತೇವೆ. ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ವಾದ ಮಾಡುತ್ತಿರುವ ನಾರಿಮನ್ ಅಭಿಪ್ರಾಯದ ಮೇರೆಗೆ ಸುಪ್ರೀಂಕೋರ್ಟ್‌ಗೆ ಹೋಗಬೇಕೆ, ಬೇಡವೇ ಎನ್ನುವ ಕುರಿತು ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News