2022ಕ್ಕೆ ಮಾನವ ಸಹಿತ ಅಂತರಿಕ್ಷ ಯಾನ: ಇಸ್ರೋ ಅಧ್ಯಕ್ಷ ಕೆ.ಶಿವನ್

Update: 2018-08-15 15:25 GMT

ಬೆಂಗಳೂರು, ಆ.15: 2022ರೊಳಗೆ ಮಾನವ ಸಹಿತ ಅಂತರಿಕ್ಷ ಯಾನ ಮಾಡುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದರು.

ಬುಧವಾರ ನಗರದ ಇಸ್ರೋ ಕೇಂದ್ರ ಕಚೇರಿಯಲ್ಲಿ 72ನೆ ಸ್ವಾತಂತ್ರ ದಿನಾಚರಣೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯ ಗಗನಯಾನದ ಭಾಷಣ ಕುರಿತು ಇಸ್ರೋ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ನಮಗೆ ಚಾಲೆಂಜಿಂಗ್, ಜತೆಗೆ ಘನತೆ ಕೂಡ ಆಗಿದೆ. ಇದೊಂದು ದೊಡ್ಡ ಯೋಜನೆಯಾಗಿದ್ದು, ಈಗಾಗಲೆ, ಇದಕ್ಕೆ ಬೇಕಾದ ತಂತ್ರಜ್ಞಾನದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

10 ಸಾವಿರ ಕೋಟಿಗಿಂತ ಕಡಿಮೆ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಯೋಜನೆಯಲ್ಲಿ, ನಮ್ಮವರೇ ಯಾನಕ್ಕೆ ಹೋಗುತ್ತಾರೆ ಎಂದು ಖಚಿತ ಪಡಿಸುತ್ತಾ, ಯಾರು ಯಾನಕ್ಕೆ ಹೋಗುತ್ತಾರೆ ಎಂಬುದು ಗೌಪ್ಯವಾಗಿರುವುದರಿಂದ ಹೇಳಲಾಗುವುದಿಲ್ಲ ಎಂದರು.

ಈ ನಿಟ್ಟಿನಲ್ಲಿ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತಷ್ಟು ಉನ್ನತ ದರ್ಜೆಗೆ ಕೊಂಡೊಯ್ಯಲಿದ್ದು, ದೇಶದ ತತ್ರಜ್ಞಾನಕ್ಕೆ ಬೇಕಾದ ಎಲ್ಲ ಉಪಯೋಗಗಳು ಇದರಿಂದ ಸಾಧ್ಯವಾಗುತ್ತವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News