ಬೆಂಗಳೂರು: ಆಕಾಶವಾಣಿಯಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ

Update: 2018-08-15 16:23 GMT

ಬೆಂಗಳೂರು, ಆ.15: ಆಕಾಶವಾಣಿ ಕಚೇರಿಯಲ್ಲಿ 72ನೇ ಸ್ವಾತಂತ್ರೋತ್ಸವವನ್ನು ಉಪ ಮಹಾನಿರ್ದೇಶಕರು(ತಾಂತ್ರಿಕ) ಹಾಗೂ ನಿಲಯದ ಮುಖ್ಯಸ್ಥ ಎ. ಹನುಮಂತು ಧ್ವಜಾರೋಹಣ ನೆರವೇರಿಸಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಮಾಹಿತಿ, ಮನರಂಜನೆ, ಶಿಕ್ಷಣದ ಪ್ರಸಾರದ ಮೂಲಕ ಆಕಾಶವಾಣಿಯು ಜನಮಾನಸದಲ್ಲಿ ನೆಲೆನಿಂತಿದೆ. ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಶ್ರೇಷ್ಠ ಗುಣಮಟ್ಟದ ಕಾರ್ಯಕ್ರಮ ಪ್ರಸಾರಕ್ಕಾಗಿ ಜನತೆಯ ಸಹಕಾರವನ್ನು ಕೋರುತ್ತೇವೆ ಎಂದು ತಿಳಿಸಿದರು.

ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ಆಕಾಶವಾಣಿಯು ರಾಜ್ಯವ್ಯಾಪಿ ಸಂಗೀತ ಸಂವಾದದ ಮೂಲಕ ಸೃಜನಾತ್ಮಕ ಸ್ವಾತಂತ್ರ ಎಂಬ ವಿಶೇಷ ಕಾರ್ಯಕ್ರಮ ಪ್ರಸಾರವನ್ನು ಬೆಳಗಿನ 10 ಗಂಟೆಯಿಂದ 11 ಗಂಟೆಯವರೆಗೆ ಆಮಂತ್ರಿತ ಶ್ರೋತೃಗಳ ಸಮ್ಮುಖದಲ್ಲಿ ಆಕಾಶವಾಣಿ ಕೇಂದ್ರದಲ್ಲಿ ಆಯೋಜಿಸಿತ್ತು ಎಂದು ಹೇಳಿದರು.

ಈ ವೇಳೆ ಖ್ಯಾತ ಸಂಗೀತಗಾರರಾದ ಬೆಂಗಳೂರು ಪ್ರವೀಣ, ಜಯಚಂದ್ರ ರಾವ, ಗಿರಿಧರ ಉಡುಪ, ವ್ಯಾಸ ವಿಠಲ, ಸೋಮಶೇಖರ ಜೋಯಿಸ್, ಭಾರದ್ವಾಜ ಸಾತವಲ್ಲಿ, ದಿಲೀಪ ಸಿಮ್ಮ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News