ಗಾಂಧೀಜಿಯ ತತ್ವಗಳನ್ನು ಪಾಲಿಸೋಣ: ಕಸಾಪ ಅಧ್ಯಕ್ಷ ಮನು ಬಳಿಗಾರ್

Update: 2018-08-15 16:25 GMT

ಬೆಂಗಳೂರು, ಆ.15: ಮಹಾತ್ಮ ಗಾಂಧೀಜಿ ಸಾರಿದ ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಅಹಿಂಸಾ ಗುಣಗಳನ್ನು ಒಳಗೊಳ್ಳಿಸಿಕೊಳ್ಳುವುದರ ಮೂಲಕ ಸ್ವಾತಂತ್ರವನ್ನು ಸದುಪಯೋಗಪಡಿಸಿಕೊಳ್ಳಬೇಕು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್

ಬುಧವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮಲ್ಲಿ ಒಗ್ಗಟ್ಟಿರದ ಕಾರಣದಿಂದಾಗಿ ಆಂಗ್ಲರು 200-300 ವರ್ಷಗಳ ಕಾಲ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರು. ಹೀಗಾಗಿ ನಮಗೆ ಒಗ್ಗಟ್ಟೆ ಮೂಲಮಂತ್ರವಾಗಲಿ ಎಂದು ತಿಳಿಸಿದರು.

ಲಕ್ಷಾಂತರ ಮಂದಿ ದೇಶಪ್ರೇಮಿಗಳು ದೇಶದ ಸ್ವಾತಂತ್ರಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಸೇವೆಯನ್ನು ನೆನೆಯುತ್ತಲೆ, ದೇಶವನ್ನು ಕಟ್ಟುವ ಕಡೆಗೆ ಮುನ್ನುಗ್ಗಬೇಕಿದೆ. ನಮ್ಮಲ್ಲಿರುವ ಜಾತೀಯತೆ, ದ್ವೇಷ, ಅಸೂಯೆ ಇವುಗಳನ್ನು ಮೊದಲು ತ್ಯಜಿಸಬೇಕೆಂದು ಅವರು ಹೇಳಿದರು.

ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪರಿಷತ್‌ನ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ.ಎನ್.ಪರಡ್ಡಿ, ಪರಿಷತ್‌ನ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News