ಬೆಂಗಳೂರು: ಮಹಿಳೆಗೆ ಅಪರೂಪದ ಹೃದಯ ಚಿಕಿತ್ಸೆ

Update: 2018-08-15 16:29 GMT

ಬೆಂಗಳೂರು, ಆ.15: ಅಪರೂಪದ ಹೃದಯ ಸಂಬಂಧಿ ರೋಗದೊಂದಿಗೆ ಹೋರಾಡುತ್ತಿದ್ದ 37 ವರ್ಷದ ಮಹಿಳೆಗೆ ನಗರದ ಸಾಗರ್ ಆಸ್ಪತ್ರೆಯ ಪರಿಣತ ಹೃದ್ರೋಗ ತಜ್ಞರ ತಂಡ ಯಶಸ್ವಿ ಚಿಕಿತ್ಸೆ ನೀಡಿದೆ. ನಂದಿನಿ ಹುಟ್ಟುವಾಗಲೇ ಲಿವೊಕಾರ್ಡಿಯಾ ಮತ್ತು ಪೇಟೆಂಟ್ ಡಕ್ಟಸ್ ಆರ್ಟ್ರಿಯಸಿಸ್ ಜೊತೆಗೆ ಸಿಟಸ್ ಇನ್ವರ್ಸಸ್ ಎಂಬ ಜನ್ಮದಾತ ವಿಕಲತೆಯ ಗಂಭೀರ ಸಮಸ್ಯೆ ಇತ್ತು. ದೇಹದ ಎಲ್ಲ ಅಂಗಗಳು ವಿರುದ್ಧ ದಿಕ್ಕಿನಲ್ಲಿದ್ದವು, ಅದರಂತೆ ಹೃದಯವೂ ದೇಹದ ಬಲಭಾಗದಲ್ಲಿತ್ತು. ಆರಂಭದಲ್ಲಿ ಈಕೆ ಇತರರಂತೆ ಸಾಮಾನ್ಯವಾಗಿ ಜೀವಿಸುತ್ತಿದ್ದರೂ ಕ್ರಮೇಣ ಪರಿಸ್ಥಿತಿ ಬಿಗಡಾಯಿಸಿತು.

ನಡೆದಾಡುವಾಗಲೂ ಉಸಿರಾಡಲು ಕಷ್ಟವಾಗುತ್ತಿತ್ತು. ಈ ಬಗ್ಗೆ ಕ್ರಮಬದ್ಧವಾಗಿ ಚಿಕಿತ್ಸೆಯ ಹಂತಗಳನ್ನು ಒಂದೊಂದಾಗಿ ಏರಿದ ಸಾಗರ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ವೆಂಶನಲ್ ಕಾರ್ಡಿಯಾಲಜಿಸ್ಟ್ ಹಾಗೂ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಕಿಶೋರ್, ಅರೋಟಾ ಮತ್ತು ಪಲ್ಮನರಿ ಅಪಧಮನಿಯ ಮಧ್ಯೆ ದೋಷಪೂರಿತ ಸಂಪರ್ಕವಿರುವುದನ್ನು ಗುರುತಿಸಿದರು. ಇದು ರಕ್ತದ ಹೆಪ್ಪುಗಟ್ಟುವಿಕೆಯಿಂದ ಉಂಟಾಗಿ ಮಾರಣಾಂತಿಕವಾಗಲಿದೆ, ಚಿಕಿತ್ಸೆ ನೀಡದೆ ಹೋದರೆ ಪಾರ್ಶ್ವವಾಯು ಅಥವಾ ಹೃದಯಾಘಾತವಾಗಲಿದೆ ಎಂಬುದನ್ನು ಕಂಡುಕೊಂಡರು.

ಚಿಕಿತ್ಸೆ ಬಗ್ಗೆ ಮಾತನಾಡಿದ ಸಾಗರ್ ಆಸ್ಪತ್ರೆಯ ಕನ್ಸ್‌ಲ್ಟೆಂಟ್ ಇಂಟರ್ವೆಂಶನಲ್ ಕಾರ್ಡಿಯಾಲಜಿಸ್ಟ್ ಹಾಗೂ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಕಿಶೋರ್, ನಂದಿನಿ ಮೊದಲ ಬಾರಿ ನಮ್ಮ ಆಸ್ಪತ್ರೆಗೆ ಬಂದಾಗ ಆಕೆ ಎದೆನೋವಿನ ಬಗ್ಗೆ ಹಾಗೂ ಆಗಾಗ ಕಾಡುವ ಉಸಿರಾಟದ ಸಮಸ್ಯೆ ಬಗ್ಗೆ ದೂರಿಕೊಂಡರು. ಆಕೆಯ ಕುಟುಂಬಸ್ಥರು, ಆಕೆಯ ಆರೋಗ್ಯ ಸ್ಥಿತಿ ಬಗ್ಗೆ ಆತಂಕಕ್ಕೊಳಗಾಗಿದ್ದರು. ಆಕೆಯ ಎಲ್ಲ ವೈದ್ಯಕೀಯ ದಾಖಲೆಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ಬಳಿಕ ಎಲ್ಲ ಅಂಗಗಳು ತಿರುಗಿದ ಸ್ಥಾನದಲ್ಲಿರುವುದು ದಿನಗಳ ಶಸ್ತ್ರಚಿಕಿತ್ಸೆ ಬಳಿಕದ ಆರೈಕೆ ನಂತರ ನಂದಿನಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News