ಬೆಂಗಳೂರು: ಬೆಮೆಲ್‌ಗೆ ಪ್ರಶಸ್ತಿಗಳ ಮಹಾಪೂರ

Update: 2018-08-15 16:30 GMT

ಬೆಂಗಳೂರು, ಆ.15: ಪುಷ್ಪಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿದ್ದ ಬಿಇಎಂಎಲ್ (ಬೆಮೆಲ್) ಕಂಪನಿ ಮಿನಿ ರತ್ನ ವರ್ಗದಲ್ಲಿ ಮೊದಲ ಸ್ಥಾನ ಪಡೆದು, ಒಟ್ಟು 70ಕ್ಕೂ ಅಧಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ತೋಟಗಾರಿಕಾ ಇಲಾಖೆ, ಕರ್ನಾಟಕ ಸರಕಾರ ಹಾಗೂ ಮೈಸೂರು ತೋಟಗಾರಿಕಾ ಸೊಸೈಟಿ 72ನೆ ಸ್ವಾತಂತ್ರೋತ್ಸವದ ಪ್ರಯುಕ್ತ ಜಂಟಿಯಾಗಿ ಆಯೋಜಿಸಿದ್ದ ಪುಷ್ಪ ಪ್ರದರ್ಶನದಲ್ಲಿ ರಕ್ಷಣಾ ಇಲಾಖೆಯಡಿಯಲ್ಲಿ ಬೆಮೆಲ್ ಕಂಪನಿ ಸೇರಿದಂತೆ ಹಲವು ಸಂಸ್ಥೆಗಳು ಭಾಗವಹಿಸಿದ್ದವು.

ಬೆಮೆಲ್ ಕಂಪನಿ 70 ವಿಭಾಗಗಳಲ್ಲಿ ಪ್ರಥಮ ಹಾಗೂ ಮೂರು ವಿಭಾಗಗಳಲ್ಲಿ ದ್ವಿತೀಯ ಪ್ರಶಸ್ತಿ ಪಡೆದು, ಏಳು ವಿಶೇಷ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದು, ಬೆಮೆಲ್‌ನ ಎಜಿಎಂ ಕೆ.ವಿ ರಾಮಕೃಷ್ಣ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News