ಈ ಮುಸ್ಲಿಂ ದಂಪತಿಗೆ ಸ್ವಿಸ್ ಪೌರತ್ವ ನಿರಾಕರಿಸಿದ್ದೇಕೆ ಗೊತ್ತೇ ?

Update: 2018-08-18 04:28 GMT

ಜಿನೀವಾ, ಆ. 18: ಹಸ್ತಲಾಘವ ನೀಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಮುಸ್ಲಿಂ ದಂಪತಿಯ ಸ್ವಿಸ್ ಪೌರತ್ವ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಘಟನೆ ವರದಿಯಾಗಿದೆ.

ಸ್ವಿಟ್ಝರ್ಲೆಂಡ್ನ ಲೌಸನ್ ನಗರ ಈ ದಂಪತಿಯ ಪೌರತ್ವ ಅರ್ಜಿಯನ್ನು ತಡೆ ಹಿಡಿದಿದೆ. ಮುಸ್ಲಿಂ ದಂಪತಿಯ ಪೈಕಿ ಪುರುಷ ಮಹಿಳೆಯರಿಗೆ ಹಾಗೂ ಮಹಿಳೆ ಪುರುಷರಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದರು ಎನ್ನುವುದು ಅರ್ಜಿ ತಿರಸ್ಕರಿಸಲು ಕಾರಣ. ಲಿಂಗ ಸಮಾನತೆ ಬಗ್ಗೆ ಈ ದಂಪತಿಗೆ ಗೌರವ ಇಲ್ಲದ ಹಿನ್ನೆಲೆಯಲ್ಲಿ ಅರ್ಜಿ ತಿರಸ್ಕರಿಸಲಾಗಿದೆ ಎಂದು ಮೇಯರ್ ಗ್ರೆಗೊರ್ ಜುನೋದ್ ಹೇಳಿದ್ದಾರೆ.

ಪೌರತ್ವದ ಮಾನದಂಡಗಳಿಗೆ ಅನುಗುಣವಾಗಿ ಈ ದಂಪತಿ ಪೌರತ್ವ ಪಡೆಯಲು ಅರ್ಹರೇ ಎಂದು ನಿರ್ಧರಿಸುವ ಸಲುವಾಗಿ ಹಲವು ತಿಂಗಳ ಹಿಂದೆ ಮಹಾನಗರ ಪಾಲಿಕೆ ಇವರನ್ನು ವಿಚಾರಣೆಗೆ ಗುರಿಪಡಿಸಿತ್ತು. ಆದರೆ ಶುಕ್ರವಾರ ಈ ಬಗ್ಗೆ ನಿರ್ಧಾರ ಪ್ರಕಟಿಸಿರುವ ಪಾಲಿಕೆ, ಏಕತೆಯ ಮಾನದಂಡದಲ್ಲಿ ಈ ದಂಪತಿ ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ಆದರೆ ದಂಪತಿ ಯಾವ ದೇಶದವರು ಎನ್ನುವ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ವಿರುದ್ಧ ಲಿಂಗಿಗಳಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದರು ಎನ್ನುವುದನ್ನು ಉಲ್ಲೇಖಿಸಿದೆ. ವಿರುದ್ಧ ಲಿಂಗಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಕಷ್ಟಪಟ್ಟರು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News