ನ.30: ಕೆಸಿಎಫ್ ದುಬೈ ಸೌತ್ ಝೋನ್ ವತಿಯಿಂದ ಬೃಹತ್ ಮೀಲಾದ್ ಸಮಾವೇಶ

Update: 2018-08-18 15:27 GMT

ದುಬೈ, ಆ. 18: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ಸೌತ್ ಝೋನ್ ಆಶ್ರಯದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ.) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಮೀಲಾದ್ ಸಮಾವೇಶ ನವಂಬರ್ 30ರಂದು ಸಂಜೆ 4ಕ್ಕೆ ಬುರ್‌ಜುಮಾನ್‌ ಹೋಲಿ ಡೇ ಇನ್ ಕಾನ್ಫರೆನ್ಸ್ ಹಾಲ್  ನಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಆಶಿಖುರ್ರಸೂಲ್ ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ನೇತೃತ್ವ ನೀಡಲಿದ್ದಾರೆ. 

ಮೌಲಿದ್ ಪಾರಾಯಣ, ಬುರ್ದಾ ಮಜ್ಲಿಸ್, ಪ್ರವಾದಿ ಪ್ರಕೀರ್ತನೆಗಳ ಆಲಾಪನೆ ಮುಂತಾದ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಝೋನ್ ಸಮಿತಿ ನಾಯಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News