ಬೆಂಗಳೂರು: ಫಲಪುಷ್ಪ ಪ್ರದರ್ಶನದಲ್ಲಿ 2.36 ಕೋಟಿ ರೂ.ಸಂಗ್ರಹ

Update: 2018-08-18 15:37 GMT

ಬೆಂಗಳೂರು, ಆ.18: ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ನಗರದ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನವನ್ನು 5 ಲಕ್ಷ ಮಂದಿ ವೀಕ್ಷಿಸಿದ್ದು, 2.36 ಕೋಟಿ ರೂ.ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ಆ.4ರಿಂದ ಆ.15ರವರೆಗೆ ನಡೆದ 208ನೆ ಫಲಪುಷ್ಪ ಪ್ರದರ್ಶನದ ವೇಳೆ ಲಾಲ್‌ಬಾಗ್‌ಗೆ ಬಂದವರ ಪ್ರವೇಶ ಶುಲ್ಕದಿಂದ ಒಟ್ಟು 2.36 ಕೋಟಿ ಸಂಗ್ರಹಿಸಲಾಗಿದೆ. ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲೆ ಈ ಬಾರಿ ಹೆಚ್ಚು ಹಣ ಸಂಗ್ರಹವಾಗಿದೆ. ಕಳೆದ ಬಾರಿ 2.14ಕೋಟಿ ರೂ. ಆಗಿತ್ತು.

ಫಲಪುಷ್ಪ ಪ್ರದರ್ಶನ ಆರಂಭವಾದ ಮೊದಲ ದಿನವೆ 12 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ, 8.2ಲಕ್ಷ ರೂ.ಸಂಗ್ರಹವಾಗಿತ್ತು,. ಕೊನೆಯ ದಿನ 1,76,907 ಮಂದಿ ಭೇಟಿ ನೀಡಿದ್ದು, 75.185ಲಕ್ಷ ರೂ. ಸಂಗ್ರಹವಾಗಿತ್ತು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News