ಬಾಲಕಿಯ ಅತ್ಯಾಚಾರ ಎಸಗಿ, ನೀರಿನ ಟಬ್‌ನಲ್ಲಿ ಮುಳುಗಿಸಿ ಹತ್ಯೆ

Update: 2018-08-24 16:12 GMT

ಥಾಣೆ, ಆ. 24: ಮಹಾರಾಷ್ಟ್ರದ ಥಾಣೆ ಸಮೀಪದ ಭೀವಂಡಿಯ ಮನೆಯೊಂದರಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳು ಭೀವಂಡಿಯಲ್ಲಿರುವ ಬಾಲಕಿಯ ಮನೆ ಪ್ರವೇಶಿಸಿದ್ದಾರೆ. ಘಟನೆ ನಡೆಯುವಾಗ ಬಾಲಕಿ ಒಬ್ಬಳೇ ಇದ್ದಳು. ದುಷ್ಕರ್ಮಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ ಎಂದು ಥಾಣೆ ಪೊಲೀಸ್‌ನ ಪಿಆರ್‌ಒ ಸುಖಾದಾ ನರ್ಕರ್ ತಿಳಿಸಿದ್ದಾರೆ. ದುಷ್ಕರ್ಮಿಗಳು ಅತ್ಯಾಚಾರ ಎಸಗಿದ ಬಳಿಕ ಬಾಲಕಿಗೆ ಥಳಿಸಿ ತಲೆಯನ್ನು ನೀರಿನ ಟಬ್‌ನ ನೀರಿನಲ್ಲಿ ಮುಳುಗಿಸಿದ್ದಾರೆ. ಇದರಿಂದ ಬಾಲಕಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಸಹೋದರಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ನಾರ್ಪೋಲಿ ಪೊಲೀಸ್ ಠಾಣೆಯ ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News