ಸಂದೀಪ್‌ಗೆ ಏಳನೇ ಸ್ಥಾನ

Update: 2018-08-24 18:44 GMT

ಜಕಾರ್ತ, ಆ.24: ಏಶ್ಯನ್ ಗೇಮ್ಸ್‌ನಲ್ಲಿ ಶುಕ್ರವಾರ ನಡೆದ ಪುರುಷರ 50 ಮೀ. ಬ್ರೀಸ್ಟ್‌ಸ್ಟ್ರೋಕ್‌ನಲ್ಲಿ ಭಾರತದ ಈಜುಪಟು ಸಂದೀಪ್ ಸೆಜ್ವಾಲ್ ಏಳನೇ ಸ್ಥಾನ ಪಡೆದರು. ಆದರೆ, 1500 ಮೀ. ಫ್ರೀಸ್ಟೈಲ್ ಫೈನಲ್‌ನಲ್ಲಿ ಅದ್ವೈತ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲರಾದರು.

ನಾಲ್ಕು ವರ್ಷಗಳ ಹಿಂದೆ ಇಂಚೋನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸಂದೀಪ್ 27.98 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಜಪಾನ್‌ನ ಯಸುಹಿರೊ ಕೊಸೆಕಿಗಿಂತ 0.91 ಸೆಕೆಂಡ್‌ನಿಂದ ಹಿಂದುಳಿದರು.

ಪುರುಷರ 1500 ಮೀ. ಸ್ಪರ್ಧೆಯಲ್ಲಿ ಅದ್ವೈತ್ 15:29.26 ಸೆಕೆಂಡ್‌ನಲ್ಲ್ಲಿ ವೇಗವಾಗಿ ಗುರಿ ತಲುಪಿದ್ದರು. ಆದರೆ, 16ರ ಹರೆಯದ ಅದ್ವೈತ್ ಫೈನಲ್‌ಗೆ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News