ಸ್ಕ್ವಾಷ್‌ನಲ್ಲಿ ಹ್ಯಾಟ್ರಿಕ್ ಕಂಚು

Update: 2018-08-25 12:47 GMT

 ಜಕಾರ್ತ, ಆ.25: ಇಂಡೋನೇಶ್ಯದ ಅವಳಿ ನಗರಗಳಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್‌ನಲ್ಲಿ ಶನಿವಾರ ಸ್ಕ್ವಾಷ್‌ನಲ್ಲಿ ಭಾರತ ಹ್ಯಾಟ್ರಿಕ್ ಕಂಚು ಪಡೆದಿದೆ.

 ದೀಪಿಕಾ ಪಳ್ಳಿಕಲ್ ಸ್ಕ್ವಾಷ್‌ನಲ್ಲಿ ಭಾರತದ ಖಾತೆಗೆ ಮೊದಲ ಕಂಚು ಜಮೆ ಮಾಡಿದರು. ದೀಪಿಕಾ ಮಹಿಳೆಯರ ಸ್ಕ್ವಾಷ್ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಮಲೇಷ್ಯಾದ ಹಾಲಿ ಚಾಂಪಿಯನ್ ನಿಕೊಲ್ ಡೇವಿಡ್ ವಿರುದ್ಧ 0-3(7-11, 9-11, 6-11) ಅಂತರದಲ್ಲಿ ಸೋಲು ಅನುಭವಿಸಿದರು. ಕಂಚು ಪದಕದ ಪ್ಲೇ -ಆಫ್ ಇಲ್ಲದ ಕಾರಣದಿಂದಾಗಿ ಸೋತರೂ ದೀಪಿಕಾ ಅವರಿಗೆ ಕಂಚು ಸಿಕ್ಕಿತು.

ಮಹಿಳೆಯರ ಸ್ಕ್ವಾಷ್‌ನ ಇನ್ನೊಂದು ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಜೋಶ್ನಾ ಚಿನ್ನಪ್ಪ ಸೋಲು ಅನುಭವಿಸಿ ಫೈನಲ್‌ಗೇರುವ ಅವಕಾಶ ಕಳೆದುಕೊಂಡರು. ಆದರೆ ಕಂಚು ಲಭಿಸಿತು.

 ಜೋಶ್ನಾ ಚಿನ್ನಪ್ಪ ಅವರು ಮಲೇಷ್ಯಾದ 19ರ ಹರೆಯದ ಶಿವಸಾಂಗರಿ ಸುಬ್ರಹ್ಮಣ್ಯಂ ಎದುರು 1-3 ಅಂತರದಲ್ಲಿ ಸೋಲು ಅನುಭವಿಸಿದರು.

 ಪುರುಷರ ಸಿಂಗಲ್ಸ್‌ನಲ್ಲಿ ಸೌರವ್ ಘೋಷಾಲ್ ಮೂಲಕ ಇನ್ನೊಂದು ಕಂಚು ಸಿಕ್ಕಿತು. ಸೌರವ್ ಅವರು ಹಾಂಕಾಂಗ್‌ನ ಚುಂಗ್ ಮಿಂಗ್ ಹು ವಿರುದ್ಧ ಸೆಮಿಫೈನಲ್‌ನಲ್ಲಿ 2-3 ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News