ಏಶ್ಯನ್ ಗೇಮ್ಸ್‌:ನೀರಜ್ ಚೋಪ್ರಾಗೆ ಐತಿಹಾಸಿಕ ಚಿನ್ನ

Update: 2018-08-27 13:27 GMT

ಜಕಾರ್ತ, ಆ.27: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಸೋಮವಾರ ನಡೆದ ಜಾವೆಲಿನ್ ಫೈನಲ್‌ನಲ್ಲಿ ತನ್ನ ಮೂರನೇ ಯತ್ನದಲ್ಲಿ ಜೀವನಶ್ರೇಷ್ಠ ಸಾಧನೆ(88.06 ಮೀ.)ಮಾಡುವುದರೊಂದಿಗೆ ಚಿನ್ನ ಗೆದ್ದುಕೊಂಡರು.

ಚೀನಾದ ಕ್ವಿಝೆನ್ ಲಿಯು(82.22 ಮೀ.) ಹಾಗೂ ಪಾಕಿಸ್ತಾನದ ನದೀಮ್ ಅರ್ಷದ್(80.75 ಮೀ.)ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.

ಚೋಪ್ರಾ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಜಾವೆಲಿನ್ ಎಸೆತಗಾರ ಎನಿಸಿಕೊಂಡರು. 1982ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಜಾವೆಲಿನ್ ಎಸೆತಗಾರ ಗುರುತೇಜ್ ಸಿಂಗ್ ಕಂಚಿನ ಪದಕ ಜಯಿಸಿದ್ದು ಈವರೆಗಿನ ಸಾಧನೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News