ವಾಯುಮಾಲಿನ್ಯದಿಂದಾಗುವ ಹೊಸ ಆರೋಗ್ಯ ಸಮಸ್ಯೆ ಬಗ್ಗೆ ಗೊತ್ತೇ?

Update: 2018-08-28 03:57 GMT

ಹೊಸದಿಲ್ಲಿ, ಆ.28: ವಾಯುಮಾಲಿನ್ಯ ನಿಮ್ಮ ಹೃದಯ ಅಥವಾ ಶ್ವಾಸಕೋಶವನ್ನು ಮಾತ್ರ ಹಾನಿ ಮಾಡುವುದಿಲ್ಲ; ಮೆದುಳಿನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಅದರಲ್ಲೂ ಮುಖ್ಯವಾಗಿ ವಯೋವೃದ್ಧರು ಒಂದು ಶಬ್ದಕ್ಕೆ ಅಥವಾ ಸರಳ ಲೆಕ್ಕ ಪೂರ್ಣಗೊಳಿಸಲು ಕೂಡಾ ತಡಕಾಡುವಂಥ ಪರಿಸ್ಥಿತಿ ಉಂಟು ಮಾಡುತ್ತದೆ ಎಂದು ವರದಿ ಎಚ್ಚರಿಸಿದೆ.

ಮಲಿನ ಗಾಳಿಯನ್ನು ದೀರ್ಘಕಾಲದವರೆಗೆ ಉಸಿರಾಡುವವರ ಮೆದುಳಿನ ಅರಿವು ಕೌಶಲಕ್ಕೆ ಗಂಭೀರ ಪ್ರಮಾಣದ ಹಾನಿಯಾಗುತ್ತದೆ ಎಂದು ಯಾಲೆ ಮತ್ತು ಪೆಕಿಂಗ್ ವಿಶ್ವವಿದ್ಯಾನಿಲಯಗಳು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ. ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡಮಿ ಆಫ್ಸ್ ಸೈನ್ಸ್‌ನ (ಪಿಎನ್‌ಎಎಸ್) ನಿಯತಕಾಲಿಕದಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

ಮಲಿನ ಗಾಳಿಯನ್ನು ದೀರ್ಘಕಾಲದವರೆಗೆ ಉಸಿರಾಡುವವರಲ್ಲಿ ಪದಗಳ ಬಳಕೆ ಮತ್ತು ಗಣಿತ ಕೌಶಲ ಭಾರೀ ಕುಸಿಯುತ್ತದೆ. ಮಹಿಳೆಯರಿಗಿಂತಲೂ ಪುರುಷರ ಮೇಲೆ ಈ ಪ್ರಮಾಣ ಅಧಿಕ. ಅದರಲ್ಲೂ ವೃದ್ಧರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಯೋಜನೆ ಹಮ್ಮಿಕೊಂಡಿದ್ದ ವಾಷಿಂಗ್ಟನ್ ಮೂಲದ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಪ್ರಕಟನೆ ಹೇಳಿದೆ.

2010ರಿಂದ 2014ರ ಅವಧಿಯಲ್ಲಿ ವಾಯುಮಾಲಿನ್ಯ ಅಧಿಕ ಇರುವ ಪ್ರದೇಶದ 32 ಸಾವಿರ ಮಂದಿ ಚೀನಿ ನಾಗರಿಕರನ್ನು ಅಧ್ಯಯನಕ್ಕೆ ಗುರಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News