ಸದ್ಯದ ಸ್ಥಿತಿ ತುರ್ತು ಪರಿಸ್ಥಿತಿಗೆ ಸಮ: ಅರುಂಧತಿ ರಾಯ್

Update: 2018-08-28 14:33 GMT

ಹೊಸದಿಲ್ಲಿ, ಆ. 28: ಗುಂಪು ದಾಳಿ ನಡೆಸಿ ಹಾಡು ಹಗಲೇ ಜನರನ್ನು ಹತ್ಯೆಗೈಯುವವರ ಮೇಲೆ ದಾಳಿ ನಡೆಸುವ ಬದಲು ವಕೀಲರು, ಕವಿಗಳು, ಲೇಖಕರು, ದಲಿತ ಹಕ್ಕು ಕಾರ್ಯಕರ್ತರು, ಬುದ್ದಿಜೀವಿಗಳ ನಿವಾಸಗಳ ಮೇಲೆ ನಡೆಸಲಾಗುತ್ತಿದೆ. ಇದು ಭಾರತ ಎತ್ತ ಸಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದೆ. ಕೊಲೆಯನ್ನು ಸಂಭ್ರಮಿಸಲಾಗುತ್ತಿದೆ. ಕೊಲೆಗಾರರನ್ನು ಗೌರವಿಸಲಾಗುತ್ತಿದೆ. ಯಾರಾದರೂ ನ್ಯಾಯದ ಬಗ್ಗೆ ಅಥವಾ ಕೇಸರಿ ಪಡೆಗಳ ವಿರುದ್ಧ ಮಾತನಾಡಿದರೆ ಕ್ರಿಮಿನಲ್‌ಗಳೆಂದು ಬಿಂಬಿಸಲಾಗುತ್ತಿದೆ. ನಿಜವಾಗಿಯೂ ಏನು ನಡೆಯುತ್ತಿದೆ?. ಇದು ಮುಂಬರುವ ಚುನಾವಣೆಯ ಸಿದ್ಧತೆ. ಇದು ಸಂಭವಿಸಲು ನಾವು ಬಿಡಲಾರೆವು. ನಾವೆಲ್ಲರೂ ಸಂಘಟಿತರಾಗಬೇಕು. ಇಲ್ಲದೇ ಇದ್ದರೆ, ನಮ್ಮ ಎಲ್ಲ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲಿದ್ದೇವೆ. ಇದು ತುರ್ತು ಪರಿಸ್ಥಿತಿ ರೀತಿಗೆ ಸಮವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News