ರಾಜ್ಯ ಸರಕಾರಕ್ಕೆ ಟ್ವಿಟರ್‌ನಲ್ಲಿ ಶುಭ ಕೋರಿದ ದೇವೇಗೌಡ

Update: 2018-08-30 14:29 GMT

ಬೆಂಗಳೂರು, ಆ.30: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಧಿಕೃತವಾಗಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ತಮ್ಮ ಖಾತೆಯನ್ನು ತೆರೆದಿದ್ದು, ಶತದಿನಗಳನ್ನು ಪೂರೈಸಿರುವ ಸಮ್ಮಿಶ್ರ ಸರಕಾರಕ್ಕೆ ಈ ಕೆಳಗಿನಂತೆ ಶುಭ ಹಾರೈಸಿದ್ದಾರೆ.

‘ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರಕಾರ ಶತದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಮೈತ್ರಿಕೂಟದಲ್ಲಿರುವ ಸಚಿವರು ಹಾಗೂ ಶಾಸಕರೆಲ್ಲರಿಗೂ ಶುಭ ಕೋರುತ್ತೇನೆ. ಈ ಸರಕಾರ ಐದು ವರ್ಷಗಳ ಕಾಲ ಜನಪರವಾಗಿ ಆಡಳಿತ ನಡೆಸುವ ಮೂಲಕ ರಾಜ್ಯದ ಅಭಿವೃದ್ಧಿ ಹೊಸ ಎತ್ತರಕ್ಕೇರಲೆಂದು’ ದೇವೇಗೌಡ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News