ಚಿನ್ನಾಭರಣ ಕಳವು ಆರೋಪಿಯ ಬಂಧನ: 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

Update: 2018-08-30 14:38 GMT

ಬೆಂಗಳೂರು, ಆ.30: ನಗರದ ವಿವಿಧ ಭಾಗಗಳಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಗಂಗಮ್ಮಗುಡಿ ಠಾಣಾ ಪೊಲೀಸರು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಾಜಿನಗರದ ಲೋಕನಾಥ್ (42) ಕಳವು ಆರೋಪಿಯಾಗಿದ್ದು, ಈತನ ಬಂಧನದಿಂದ ಗಂಗಮ್ಮಗುಡಿ-5, ಪೀಣ್ಯ-7, ಸೋಲದೇವನಹಳ್ಳಿ-3, ಜಾಲಹಳ್ಳಿ-1, ಬಾಗಲಗುಂಟೆ-5, ಯಶವಂತಪುರ-5 ಸೇರಿದಂತೆ ಒಟ್ಟು 26 ಹಗಲು ಮತ್ತು ರಾತ್ರಿ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಯಶವಂತಪುರದ ಉಪ ವಿಭಾಗದ ಎಸಿಪಿ ರವಿಪ್ರಸಾದ್ ಮಾಹಿತಿ ನೀಡಿದ್ದಾರೆ.

ಆ.8ರಂದು ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರುದಾರ ಎಂ.ಜಾನ್‌ಪೌಲ್ ಮನೆಗೆ ನುಗ್ಗಿದ ಆರೋಪಿಯು, ಮನೆಯಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಮನೆಯ ಮಾಲಕ ನೀಡಿದ ದೂರಿದ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News