×
Ad

ಟ್ರಾಫಿಕ್ ಪೊಲೀಸರಿಗೆ ವಾರದ ರಜೆ ಕಡ್ಡಾಯ: ಸಂಚಾರಿ ಪೊಲೀಸ್ ಇಲಾಖೆ ನಿರ್ಧಾರ

Update: 2018-08-30 20:21 IST

ಬೆಂಗಳೂರು, ಆ.30: ಸಿಬ್ಬಂದಿ ಕೊರತೆ, ಕೆಲಸದಲ್ಲಿ ತೀವ್ರ ಒತ್ತಡ, ವಾರದ ರಜೆಯಿಲ್ಲ ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ಸ್ವಲ್ಪ ನಿರಾಳತೆ ನೀಡಲು ಸಂಚಾರಿ ಪೊಲೀಸ್ ಇಲಾಖೆ ನಿರ್ಧರಿಸಿದೆ.

ಇಲಾಖೆಯ ಹಿರಿಯ ಅಧಿಕಾರಿಗಳು, ಸಂಚಾರಿ ಪೊಲೀಸ್ ಹೆಚ್ಚುವರಿ ಆಯುಕ್ತ ಆರ್.ಹಿತೇಂದ್ರ ಸಭೆ ನಡೆಸಿ ಕಾನ್ಸ್‌ಟೇಬಲ್ಗಳಿಗೆ ವಾರದ ರಜೆ ನೀಡದೆ ದುಡಿಸಿಕೊಳ್ಳುವ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇನ್ನು ಮುಂದೆ ವಾರಕ್ಕೊಂದು ಕಡ್ಡಾಯವಾಗಿ ರಜೆ ನೀಡಬೇಕೆಂದು ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಕಾನ್ಸ್‌ಟೇಬಲ್‌ಗಳಿಗೆ ಒಂದು ದಿನ ರಜೆ ಸಿಗಲಿದೆ. ಅನೇಕ ಕಾರಣಗಳಿಂದಾಗಿ ಟ್ರಾಫಿಕ್ ಪೊಲೀಸರಿಗೆ ರಜೆ ನೀಡದ ಪ್ರಕರಣಗಳು ವರದಿಯಾಗಿದೆ. ಹೀಗಾಗಿ, ಇನ್ನು ಮುಂದೆ ರಜೆ ನಿರಾಕರಿಸುವ ಅಧಿಕಾರಿಗಳಿಗೆ ಇದು ಶಾಕ್ ನೀಡಿದೆ. ಅಲ್ಲದೆ, ರಜೆ ನಿಕಾರಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News