ವಿದ್ಯುತ್ ಅವಘಡದಲ್ಲಿ ಸುಟ್ಟ ಚರ್ಮಕ್ಕೆ ಯಶಸ್ವಿ ಚಿಕಿತ್ಸೆ
ಬೆಂಗಳೂರು, ಆ.28: ವಿದ್ಯುತ್ ಅವಘಡದಲ್ಲಿ ಸುಟ್ಟು ಹೋಗಿದ್ದ ಆರು ವರ್ಷದ ಬಾಲಕನಿಗೆ ರೈನ್ ಬೋ ಮಕ್ಕಳ ತಜ್ಞರು ಉಚಿತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ ಎಂದು ಡಾ.ರಕ್ಷಯ್ ಶೆಟ್ಟಿ ತಿಳಿಸಿದರು.
ಗುರುವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ಅವಘಡದಲ್ಲಿ ಗಂಭೀರ ಸ್ಥಿತಿ ತಲುಪಿದ್ದ ಅಕಮಾಸ್ ಟಿಗ್ಗನ ಮಂಡಿಯಿಂದ ಮುಖದವರೆಗೂ 60ರಷ್ಟು ಸುಟ್ಟಗಾಯಗಳಾಗಿದ್ದವು, 40ಕ್ಕಿಂತ ಹೆಚ್ಚು ಸುಟ್ಟ ಮಗುವಿನ ಸಾವಿನ ಸಂಭವನೀಯತೆ ಅಧಿಕವಿರುತ್ತದೆ. ಆದರೆ, ಸುಟ್ಟ ಚರ್ಮದ ಯಶಸ್ವಿ ಚಿಕಿತ್ಸೆ ನೀಡಿರುವುದು ಸಂಸ್ಥೆಯ ಹೆಗ್ಗಳಿಕೆ ಎಂದು ಹೇಳಿದರು.
ರೈನ್ ಬೋ ತಂಡ 2.5 ತಿಂಗಳ ಪರಿಶ್ರಮ ಹಾಗೂ ಪ್ರೀತಿಯ ಆರೈಕೆಯಿಂದ ಬಾಲಕ ಗುಣಮುಖವಾಗಿ ಮನೆಗೆ ಹಿಂದಿರುಗಿದ್ದಾನೆ. ಅಲ್ಲದೆ ಪೋಷಕರಲ್ಲಿ ಮಕ್ಕಳ ಅನಿರೀಕ್ಷಿತ ತುಂಟಾಟಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ರೈನ್‌ಬೋ ಚಿಲ್ಡ್ರನ್ ಹಾಸ್ಪಿಟಲ್‌ನ ಕ್ಲಸ್ಟರ್ ಹೆಡ್ ನೀರಜ್ ಲಾಲ್, ಡಾ.ಪ್ರಿಯದರ್ಶನ್, ಡಾ.ಸುಜಾತ ತ್ಯಾಗರಾಜನ್ ಸೇರಿದಂತೆ ಮತ್ತಿತರರು ಇದ್ದರು.