ಯುಎಸ್ ಓಪನ್: ನಡಾಲ್ ಮೂರನೇ ಸುತ್ತಿಗೆ

Update: 2018-08-30 18:34 GMT

ನ್ಯೂಯಾರ್ಕ್, ಆ.30: ಹಾಲಿ ಚಾಂಪಿಯನ್ ರಫೆಲ್ ನಡಾಲ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ನಡಾಲ್ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕರಹಿತ ವಾಸೆಕ್ ಪೊಸ್ಪಿಸಿಲ್‌ರನ್ನು 6-3, 6-4, 6-2 ಅಂತರದಿಂದ ಸೋಲಿಸಿದರು.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಸ್ಪೇನ್‌ನ ಫೆರ್ನಾಂಡೊ ವೆರ್ಡಾಸ್ಕೊ ವಿರುದ್ಧ 5-7, 6-2, 4-6,4-6 ಅಂತರದಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಸಹೋದರಿಯರ ಸವಾಲಿಗೆ ವೇದಿಕೆ ಸಜ್ಜು

ಇದೇ ವೇಳೆ, ಮಹಿಳೆಯರ ಸಿಂಗಲ್ಸ್ ನಲ್ಲಿ ಬುಧವಾರ ವಿಲಿಯಮ್ಸ್ ಸಹೋದರಿಯರಾದ ಸೆರೆನಾ ಹಾಗೂ ವೀನಸ್ ನಡುವಿನ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.

ಬುಧವಾರ ನಡೆದ ಪಂದ್ಯದಲ್ಲಿ 6 ಬಾರಿಯ ಚಾಂಪಿಯನ್ ಸೆರೆನಾ ಜರ್ಮನಿಯ ಕರಿನಾ ವಿಥೋಫ್ಟ್ ವಿರುದ್ಧ 6-2, 6-2 ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ. 2000 ಹಾಗೂ 2001ರ ಚಾಂಪಿಯನ್ ವೀನಸ್ ಇಟಲಿಯ ಕಮಿಲಾ ಗಿಯೊರ್ಗಿ ವಿರುದ್ಧ 6-4, 7-5 ಅಂತರದಿಂದ ಜಯ ಸಾಧಿಸಿ 17ನೇ ಬಾರಿ 3ನೇ ಸುತ್ತಿಗೆ ತೇರ್ಗಡೆಯಾದರು. ಸಹೋದರಿಯರು ಶುಕ್ರವಾರ ಯುಎಸ್ ಓಪನ್‌ನಲ್ಲಿ ಆರನೇ ಬಾರಿ ಮುಖಾಮುಖಿಯಾಗಲಿದ್ದಾರೆ. ವೀನಸ್ ಅವರು ಸೆರೆನಾ ವಿರುದ್ಧ ಕಳೆದ 20 ವರ್ಷಗಳಲ್ಲಿ 17-12 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ. 1998ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಈ ಇಬ್ಬರು ಮೊದಲ ಬಾರಿ ಸೆಣಸಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News