ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ ಭಾರತ-ಪಾಕಿಸ್ತಾನದ ಸೈನಿಕರು

Update: 2018-08-31 10:43 GMT

ಹೊಸದಿಲ್ಲಿ, ಆ.31: ರಷ್ಯಾದಲ್ಲಿ ಬಾಲಿವುಡ್ ಹಾಡೊಂದಕ್ಕೆ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಒಂದಾಗಿ ನೃತ್ಯ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬೀಜಿಂಗ್ ಮೂಲದ ಶಾಂಘೈ ಕಾರ್ಪೊರೇಷನ್ ಆರ್ಗನೈಸೇಶನ್ ನ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ನಂತರ ಸೈನಿಕರು ನೃತ್ಯ ಮಾಡಿದ್ದಾರೆ. ಎರಡೂ ದೇಶಗಳ ಸೈನಿಕರು ನೃತ್ಯ ಮಾಡುತ್ತಿರುವ ವಿಡಿಯೋವನ್ನು ಹೊಸದಿಲ್ಲಿಯಲ್ಲಿರುವ ರಷ್ಯಾ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News