ರಾಹುಲ್‌ ಗಾಂಧಿ ವಿಮಾನ ಅವಘಡ ವಿಚಾರ: ಕೇಂದ್ರ ಡಿಜಿಪಿ ವರದಿ ನಿರೀಕ್ಷೆಯಲ್ಲಿದ್ದೇವೆ; ಡಾ.ಜಿ.ಪರಮೇಶ್ವರ್

Update: 2018-08-31 13:25 GMT

ಬೆಂಗಳೂರು, ಆ. 31: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ವಿಮಾನ ಅವಘಡ ಸಂಭವಿಸಿದ್ದು, ಭದ್ರತಾ ಲೋಪದ ಬಗ್ಗೆ ಈಗಾಗಲೇ ದೂರು ದಾಖಲಾಗಿದ್ದು, ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಡಿಜಿಪಿ ವರದಿ ನೀಡಬೇಕಿತ್ತು ಇನ್ನೂ ನೀಡಿಲ್ಲ. ಇನ್ನೂ ಏಕೆ ವರದಿ ನೀಡಿಲ್ಲ ಎಂಬ ಬಗ್ಗೆ ಮಾಹಿತಿಯೂ ಇಲ್ಲ. ವರದಿ ಇಲ್ಲದೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.

ಅವಘಡ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಿಮಿತ್ತ ಎಪ್ರಿಲ್ 26ರಂದು ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ವಿಮಾನ ಅವಘಡ ಸಂಭವಿಸಿತ್ತು. ಕೇವಲ 20 ಸೆಕೆಂಡ್ ವಿಳಂಬವಾಗಿದ್ದರೂ ಅವರ ಜೀವಕ್ಕೆ ಅಪಾಯವಿತ್ತು ಎಂಬ ಮಾಹಿತಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೊರಹಾಕಿದೆ.

ವಿಧಾನಸಭೆಯ ಪ್ರಚಾರ ನಿಮಿತ್ತ ರಾಹುಲ್ ಗಾಂಧಿ ಅವರು ವಿಶೇಷ ವಿಮಾನದಲ್ಲಿ ಹೊಸದಿಲ್ಲಿಯಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದರು. ಈ ವೇಳೆ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಾಣಿಸಿಕೊಂಡಿತ್ತು. ವಿಮಾನ ದಿಢೀರನೆ ಎಡಭಾಗಕ್ಕೆ ವಾಲಿತ್ತು. ಈ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಆಗಸದಿಂದ ಅತ್ಯಂತ ವೇಗವಾಗಿ ನೆಲಕ್ಕೆ ಕುಸಿದ ಪರಿಣಾಮ ಅವಘಡ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News