ಎನ್‌ಜಿಟಿ ಆದೇಶಕ್ಕೆ ಕಾನೂನಾತ್ಮಕ ಬದಲಾವಣೆ: ಡಾ.ಜಿ.ಪರಮೇಶ್ವರ್

Update: 2018-08-31 14:07 GMT

ಬೆಂಗಳೂರು, ಆ.31: ಕೆರೆ, ರಾಜಕಾಲುವೆ ಬಫರ್ ರೆನ್ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‌ಜಿಟಿ) ಆದೇಶವನ್ನು ಕಾನೂನಾತ್ಮಕವಾಗಿ ಸಡಿಲಗೊಡಿಸುವ ಸಂಬಂಧ ಪರಿಶೀಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಶುಕ್ರವಾರ ವಿಧಾನಸೌಧದಲ್ಲಿ ಕ್ರೆಡಾಯ್ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಜಿಟಿ ಬೆಂಗಳೂರಿಗೆ ಮಾತ್ರ ಕೆರೆ ಸಮೀಪ 75, 50, 25 ಮೀಟರ್ ಬಫರ್ ರೆನ್ ಎಂದು ಹೇಳಿದ್ದಾರೆ. ದೇಶದ ಬೇರೆ ಯಾವ ನಗರಗಳಿಗೂ ಈ ನಿಯಮವಿಲ್ಲ ಎಂದರು.

ಎನ್‌ಜಿಟಿ ಅವರು ಬೆಂಗಳೂರಿಗೆ ಮಾತ್ರ ನಿಯಮ ಅನ್ವಯವಾಗುವಂತೆ ಆದೇಶ ನೀಡಿದ್ದಾರೆ. ಈ ನಿಯಮವನ್ನು ನಗರದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಮನೆಗಳು ನಿರ್ಮಾಣವಾಗಿವೆ ಎಂದು ಅವರು ಹೇಳಿದರು.

ಈ ನಿಯಮ ಅನುಸರಿಸಲು ಹೋದರೆ ನಗರದ ಅರ್ಧದಷ್ಟು ಮನೆ ತೆರವು ಮಾಡಬೇಕಾಗುತ್ತದೆ. ಹೀಗಾಗಿ ಈ ನಿಯಮವನ್ನು ಕಾನೂನಾತ್ಮಕ ಬದಲಾವಣೆ ಮಾಡುವಂತೆ ಕ್ರೆಡಾಯ್ ಅವರು ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News