ಬೀದಿ ನಾಯಿಗಳ ಬಗ್ಗೆ ನಿರ್ಲಕ್ಷ್ಯ: ಬಿಬಿಎಂಪಿ ಅಧಿಕಾರಿ ಸೇರಿ ಮೂವರ ಬಂಧನ

Update: 2018-08-31 14:10 GMT

ಬೆಂಗಳೂರು, ಆ.31: ಬೀದಿ ನಾಯಿಗಳನ್ನು ಹಿಡಿದು ಸುರಕ್ಷತಾ ಕ್ರಮ ಅನುಸರಿಸದೆ ಬೀದಿ ನಾಯಿಗಳಿಂದ ಬಾಲಕನ ಹಲ್ಲೆಗೆ ಕಾರಣವಾದ ಆರೋಪದಡಿ ಬಿಬಿಎಂಪಿ ಅಧಿಕಾರಿ ಹಾಗೂ ಸಂಬಂಧಪಟ್ಟ ಹೊರ ಗುತ್ತಿಗೆದಾರರನ್ನು ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಮಹದೇವಪುರ ವಲಯದ ಪಶುಪಾಲನೆ ಸಹಾಯಕ ನಿರ್ದೇಶಕ ಡಾ.ಶ್ರೀರಾಮ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಅರುಣ್ ಮುತಾಲಿಕ್ ದೇಸಾಯಿ ಹಾಗೂ ಗುತ್ತಿಗೆದಾರ ರವಿಶಂಕರ್ ಬಂಧಿತರು ಎಂದು ಡಿಸಿಪಿ ವೈಟ್‌ಫೀಲ್ಡ್ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಆ.29ರಂದು ಪ್ರವೀಣ್ ಎಂಬಾತ ನಗರದ ವಿಭೂತಿಪುರ ಕೆರೆಯ ಬಳಿ ಆಟವಾಡುತ್ತಿದ್ದಾಗ 8 ರಿಂದ 10 ಬೀದಿ ನಾಯಿಗಳು ದಾಳಿ ನಡೆಸಿ ಗಾಯ ಮಾಡಿದ್ದವು. ಈ ಸಂಬಂಧ ಆ.30ರಂದು ಮುರುಗಮ್ಮ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು, ಮೂವರನ್ನು ಬಂಧಿಸಿ ಐಪಿಸಿ 289, 338 ಅಡಿ ಇಲ್ಲಿನ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News