ನಂದಮೂರಿ ಹರಿಕೃಷ್ಣ ಮೃತದೇಹದೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಆಸ್ಪತ್ರೆಯ ಸಿಬ್ಬಂದಿ

Update: 2018-09-01 07:09 GMT

ಹೈದರಾಬಾದ್, ಸೆ.1: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಟ-ರಾಜಕಾರಣಿ ನಂದಮೂರಿ ಹರಿಕೃಷ್ಣವರ ಮೃತದೇಹದ ಜೊತೆ ಕ್ಲಿಕ್ಕಿಸಿದ ನಗರದ ಕಾಮಿನೇನಿ ಆಸ್ಪತ್ರೆಯ ನಾಲ್ಕು ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ತನ್ನ ಸಿಬ್ಬಂದಿಯ ಅಸಂವೇದಿತನದ ವರ್ತನೆಗೆ ಆಸ್ಪತ್ರೆಯ ಆಡಳಿತ ಕ್ಷಮೆಯನ್ನೂ ಕೋರಿದೆ.

ನಂದಮೂರಿ ಹರಿಕೃಷ್ಣ ಅವರು ಚಲಾಯಿಸುತ್ತಿದ್ದ ವಾಹನ ತೆಲಂಗಾಣದ ನಲಗೊಂಡ ಜಿಲ್ಲೆಯ  ನಾರ್ಕೆಟ್‍ಪಳ್ಳಿ ಸಮೀಪದ ಅನ್ನಪರ್ತಿ ಎಂಬಲ್ಲಿ ಅಪಘಾತಕ್ಕೀಡಾದ ನಂತರ ಅವರನ್ನು ಕಾಮಿನೇನಿ ಆಸ್ಪತ್ತೆಗೆ ದಾಖಲಿಸಲಾಗಿತ್ತು. ಆಗಸ್ಟ್ 29ರಂದು ಆಸ್ಪತ್ರೆಯಲ್ಲಿ ಅವರನ್ನು ಮೃತ ಎಂದು ಘೋಷಿಸಿದ ಸ್ವಲ್ಪವೇ ಹೊತ್ತಿನಲ್ಲಿ ಈ ಸೆಲ್ಫಿ  ಕ್ಲಿಕ್ಕಿಸಲಾಗಿತ್ತಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಲವು ನೆಟ್ಟಿಗರು ಈ ರೀತಿಯಾಗಿ ಅಸಂವೇದಿತನದಿಂದ ವರ್ತಿಸಿದ  ಆಸ್ಪತ್ರೆ ಸಿಬ್ಬಂದಿಯನ್ನು ಖಂಡಿಸಿದ್ದರಲ್ಲದೆ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂಬ ಸಲಹೆಯನ್ನೂ ನೀಡಿದ್ದರು. ಕೆಲವರು ಇಂತಹ ಚಿತ್ರಗಳನ್ನು ಶೇರ್ ಮಾಡಬಾರದೆಂದೂ ಹೇಳಿಕೊಂಡಿದ್ದರು.

ನಂದಮೂರಿ ಹರಿಕೃಷ್ಣ ಅವರು ಆಂಧ್ರ ಪ್ರದೇಶದಲ್ಲಿ ನೆಲ್ಲೂರಿನಲ್ಲಿ ನಡೆಯಲಿದ್ದ ವಿವಾಹ ಸಮಾರಂಭವೊಂದಕ್ಕೆ ತೆರಳುತ್ತಿದ್ದರು. ಆದಷ್ಟು ಬೇಗ ತಲುಪಬೇಕೆಂಬ ಅವಸರದಲ್ಲಿ ವಾಹನವನ್ನು ಅತ್ಯಂತ ವೇಗವಾಗಿ ಅವರು ಓಡಿಸುತ್ತಿದ್ದರೆನ್ನಲಾಗಿದ್ದು ಇನ್ನೊಂದು ವಾಹನವನ್ನು ಓವರ್‍ಟೇಕ್ ಮಾಡುವ ಭರದಲ್ಲಿ ಅವರ ಕಾರು ರಸ್ತೆ ವಿಭಜಕಕ್ಕೆ ಬಡಿದು ರಸ್ತೆಯ ಇನ್ನೊಂದು ಕಡೆಯಲ್ಲಿ ಉರುಳಿ ಬಿದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News