ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಬಿಜೆಪಿ ಸೇರಲಿದ್ದಾರೆಯೇ?: ಇಲ್ಲಿದೆ ಅವರ ಪ್ರತಿಕ್ರಿಯೆ

Update: 2018-09-02 08:21 GMT

ಬೆಂಗಳೂರು, ಸೆ.2: ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ವರದಿಗಳು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿ ರತ್ನಪ್ರಭಾರನ್ನು ಸೆಳೆಯಲಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಸ್ವತಃ ರತ್ನಪ್ರಭಾ ಅವರೇ thenewsminute.comಗೆ ಪ್ರತಿಕ್ರಿಯೆ ನೀಡಿದ್ದು, ಈ ವದಂತಿಗಳನ್ನು ನಿರಾಕರಿಸಿದ್ದಾರೆ.

“ನಾನು ಬಿಜೆಪಿ ಸೇರಿಲ್ಲ. ನಾನು ಬೆಂಗಳೂರಿನಲ್ಲೂ ಇಲ್ಲ. ಇದೆಲ್ಲವೂ ಸುಳ್ಳು. ಬೆಳಗ್ಗಿನಿಂದ ನನಗೆ ಕರೆಗಳು ಬರುತ್ತಲೇ ಇವೆ. ಯಾರೂ ಈ ಬಗ್ಗೆ ನನ್ನನ್ನು ಸಂಪರ್ಕಿಸಿಲ್ಲ” ಎಂದವರು ತಿಳಿಸಿದ್ದಾರೆ.

ಈ ನಕಲಿ ಸುದ್ದಿಯನ್ನು ಯಾರೋ ವೈಯಕ್ತಿಕ ವೈಷಮ್ಯದಿಂದ ಸೃಷ್ಟಿಸಿದ್ದಾರೆ ಎಂದವರು ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ರತ್ನಪ್ರಭಾರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News