ಸೆ.3 ರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಯುರೋಪ್ ಪ್ರವಾಸ

Update: 2018-09-02 15:11 GMT

ಬೆಂಗಳೂರು,ಸೆ.2: ನಾಳೆಯಿಂದ ಮಾಜಿ ಸಿದ್ದರಾಮಯ್ಯ ಯುರೋಪ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಹೇಳಿಕೆ ನೀಡಿದ ಸಿದ್ದರಾಮಯ್ಯ, ನಾಳೆ ಬೆಳಗ್ಗೆ 8 ಗಂಟೆಗೆ ಹೊರಡುತ್ತಿದ್ದೇವೆ. ರಷ್ಯಾ, ಇಂಗ್ಲೆಂಡ್, ಜರ್ಮನಿ, ಪ್ಯಾರಿಸ್, ಸ್ಕಾಟ್ಲೆಂಡ್ ಗಳಿಗೆ ಪ್ರವಾಸ ಹೊರಟಿದ್ದೇವೆ ಎಂದರು.

ನಾಲ್ಕು ಜನ ಪ್ರವಾಸ ಹೊರಡುತ್ತಿದ್ದೇವೆ. ನಾನು, ನನ್ನ ಮಗ ಯತೀಂದ್ರ, ಗೋವಿಂದರಾಜ್ ಮತ್ತು ಅವರ ಮಗ ಪ್ರವಾಸ ಹೊರಟಿದ್ದೇವೆ. ಅಲ್ಲಿಂದ 15 ಕ್ಕೆ ಪ್ರವಾಸದಿಂದ ವಾಪಸ್ ಬರುತ್ತೇವೆ. ಶಾಸಕರು ಪ್ರವಾಸಕ್ಕೆ ಬರುತ್ತಾರೆ ಅನ್ನುವುದು ಸುಳ್ಳು ಸುದ್ಧಿ. ಮಾಧ್ಯಮಗಳೇ ಸುಳ್ಳು ಸುದ್ದಿ ಮಾಡಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News