ಎಚ್‌ಎಎಲ್ ಅಧ್ಯಕ್ಷರಾಗಿ ಆರ್.ಮಾಧವನ್ ಆಯ್ಕೆ

Update: 2018-09-02 15:31 GMT

ಬೆಂಗಳೂರು, ಸೆ. 2: ಭಾರತದ ವಾಯುಯಾನ ಸಂಸ್ಥೆಯಾದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್)ಗೆ ನೂತನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಆರ್.ಮಾಧವನ್ ನೇಮಕವಾಗಿದ್ದಾರೆ.

ಟಿ. ಸುವರ್ಣ ರಾಜು ಸ್ಥಾನ್ಕಕೆ ಮಾಧವನ್ ನೇಮಕವಾಗಿದ್ದು ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಈ ಮೊದಲು ಮಾಧವಲ್ ಲಖನೌದಲ್ಲಿ ಎಚ್‌ಎಎಲ್ ಪರಿಕರಗಳ ವಿಭಾಗದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮಾತನಾಡಿದ ಮಾಧವನ್, ಏರೋಸ್ಪೇಸ್ ಉದ್ಯಮದಲ್ಲಿ ಎಚ್‌ಎಎಲ್ ಅಗ್ರ ಸ್ಥಾನದಲ್ಲಿದ್ದು ಈ ಸ್ಥಾನವನ್ನು ಕಾಪಾಡಿಕೊಂಡು ಹೋಗಬೇಕಿದೆ. ದೇಶೀಯ ಸರಕನ್ನು ಬಳಸಿ ವಿಶ್ವದರ್ಜೆಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಪೂರೈಸುವುದು ನನ್ನ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ವೈಮಾನಿಕ ಕ್ಷೇತ್ರದಲ್ಲಿ ಸಂಸ್ಥೆಯ ಉನ್ನತಿಯ ಸಂಬಂಧ ನಾವು ಕೆಲಸ ಮಾಡುತ್ತಿದ್ದು ಎಲ್ಲಾ ಪಾಲುದಾರರ ಬೆಂಬಲ, ಸಹಭಾಗಿತ್ವವು ಸಂಸ್ಥೆಯ ಭವಿಷ್ಯದ ಏಳ್ಗೆಗೆ ಮುಖ್ಯವಾಗಿದೆ ಎಂದರು.

ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಮಾಧವನ್ ರಾಯಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದುಕೊಂಡಿದ್ದಾರೆ. ಐಐಟಿ ಮದ್ರಾಸ್‌ನಲ್ಲಿ ಎಂ.ಟೆಕ್ ಪದವಿ ಪೂರೈಸಿದ್ದಾರೆ. 1982ರಲ್ಲಿ ಎಚ್‌ಎಎಲ್‌ಗೆ ಮಾಧವನ್ ಮ್ಯಾನೇಜ್ಮೆಂಟ್ ತರಬೇತುದಾರರಗಿ ಸೇರ್ಪಡೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News