ಕೇರಳದಾದ್ಯಂತ ಇಲಿಜ್ವರದ ಹಾವಳಿ: 57 ಸಾವು, 297 ಮಂದಿಯಲ್ಲಿ ಸೋಂಕು ಪತ್ತೆ

Update: 2018-09-03 08:47 GMT

ತಿರುವನಂತಪುರಂ,ಸೆ.೩: ಕೇರಳದಾದ್ಯಂತ ಇಲಿಜ್ವರದ ಹಾವಳಿ ಹೆಚ್ಚಿದ್ದು, ಈವರೆಗೆ 57 ಮಂದಿ ಬಲಿಯಾಗಿದ್ದಾರೆ. 297 ಮಂದಿಗೆ ಇಲಿಜ್ವರ ಸೋಂಕಿದೆ ಎಂದು ದೃಢಪಟ್ಟಿದೆ. ಆರೋಗ್ಯ ಇಲಾಖೆ ಕಟ್ಟೆಚ್ಚರ ಪಾಲಿಸುವಂತೆ ಸಾರ್ವಜನಿಕರಿಗೆ ಸೂಚಿಸಿದೆ.

ಕೇರಳ ಪ್ರವಾಹದ ಬಳಿಕ ಇಲಿಜ್ವರ ವ್ಯಾಪಕವಾಗಿ ಹರಡುತ್ತಿದೆ. ಆಗಸ್ಟ್ ಒಂದರಿಂದ ನಿನ್ನೆಯವರೆಗೆ 57 ಮಂದಿ ಇಲಿಜ್ವರಕ್ಕೆ ಬಲಿಯಾಗಿದ್ದಾರೆ. ಹತ್ತು ಮಂದಿ ಇಲಿಜ್ವರದಿಂದ ಮತ್ತು 47 ಮಂದಿ ಇಲಿಜ್ವರದ ಲಕ್ಷಣಗಳಿದ್ದವರು ಮೃತಪಟ್ಟಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ 1016 ಮಂದಿಯಲ್ಲಿ 297 ಮಂದಿಗೆ ಇಲಿಜ್ವರ ಇರುವುದು ದೃಢಪಟ್ಟಿದೆ.

ಕಲ್ಲಿಕೋಟೆ ಜಿಲ್ಲೆಯಲ್ಲಿ ಹೆಚ್ಚು ಇಲಿಜ್ವರ ಪ್ರಕರಣಗಳು ಕಂಡು ಬಂದಿದ್ದು, ಮಲಪ್ಪುರಂ, ಪಾಲಕ್ಕಾಡ್, ತೃಶೂರ್ ಜಿಲ್ಲೆಗಳಲ್ಲಿ ಇಲಿಜ್ವರ ಹಾವಳಿ ವಿಪರೀತವಾಗಿದೆ. ಕಾಸರಗೋಡು ಹೊರತಾಗಿ ಉಳಿದೆಲ್ಲ ಜಿಲ್ಲೆಗಳಲ್ಲಿ ಇಲಿಜ್ವರದ ಕುರಿತು ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಇಲಿಜ್ವರ ಪ್ರತಿರೋಧಕ ಮದ್ದು ಡೊಕ್ಸಿಸೈಕ್ಲಿನ್ ವಿತರಿಸಲಾಗುತ್ತಿದ್ದು, ಹೆಚ್ಚುವರಿ ತಾತ್ಕಾಲಿಕಾ ಆಸ್ಪತ್ರೆಗಳನ್ನು ತೆರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News