ನೋಟ್ ಬ್ಯಾನ್ ನಂತರ ಆರ್ಥಿಕತೆ ಹಳಿತಪ್ಪಲು ರಘುರಾಮ್ ರಾಜನ್ ಕಾರಣ ಎಂದ ನೀತಿ ಆಯೋಗದ ಉಪಾಧ್ಯಕ್ಷ

Update: 2018-09-03 10:51 GMT

ಹೊಸದಿಲ್ಲಿ, ಸೆ.3: ನೋಟ್ ಅಮಾನ್ಯದ ನಂತರ ದೇಶದ ಆರ್ಥಕತೆ ಹಳಿತಪ್ಪಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರೇ ಕಾರಣ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

ಎನ್ ಪಿಎಗಳ ಬಗೆಗಿನ ರಾಜನ್ ಅವರ ನೀತಿಗಳು ಆರ್ಥಿಕತೆಯ ಹಳಿ ತಪ್ಪಿಸಿವೆ ಹೊರತು 500 ಮತ್ತು 1000 ರೂ. ನೋಟುಗಳನ್ನು ಬ್ಯಾನ್ ಮಾಡುವ ಸರಕಾರದ ಕ್ರಮವಲ್ಲ ಎಂದು ಅವರು ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

“ನೋಟ್ ಬ್ಯಾನ್ ನಂತರ ಆರ್ಥಿಕತೆಯ ಪ್ರಗತಿ ಕುಂಠಿತಗೊಂಡಿರುವುದು ನೋಟು ಅಮಾನ್ಯದಿಂದಲ್ಲ” ಎಂದವರು ಹೇಳಿದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News