ಐದನೇ ಟೆಸ್ಟ್ ಬಳಿಕ ಇಂಗ್ಲೆಂಡ್ ದಾಂಡಿಗ ಕುಕ್ ನಿವೃತ್ತಿ

Update: 2018-09-03 11:47 GMT

ಲಂಡನ್, ಸೆ.3: ಇಂಗ್ಲೆಂಡ್‌ನ ಹಿರಿಯ ದಾಂಡಿಗ ಅಲಿಸ್ಟೈರ್ ಕುಕ್ ಈಗ ನಡೆಯುತ್ತಿರುವ ಭಾರತ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ.

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಸೋಮವಾರ ಈ ವಿಚಾರವನ್ನು ಬಹಿರಂಗಪಡಿಸಿದೆ.

 ಓವಲ್‌ನಲ್ಲಿ ಸೆ.7 ರಿಂದ ಐದನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದು ಕುಕ್ ಪಾಲಿಗೆ 161ನೇ ಟೆಸ್ಟ್ ಪಂದ್ಯವಾಗಿದೆ. ಇಂಗ್ಲೆಂಡ್‌ನ ಮಾಜಿ ನಾಯಕ ಕುಕ್ ಇಂಗ್ಲೆಂಡ್ ಪರ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. 160 ಟೆಸ್ಟ್ ಪಂದ್ಯಗಳಲ್ಲಿ 44.88ರ ಸರಾಸರಿಯಲ್ಲಿ 32 ಶತಕ ಹಾಗೂ 56 ಅರ್ಧಶತಕಗಳ ಸಹಿತ 12,254 ರನ್ ಗಳಿಸಿದ್ದಾರೆ.

2014ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿರುವ ಕುಕ್ ಈ ತನಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿಲ್ಲ. 2010 ಹಾಗೂ 2014ರ ನಡುವೆ 69 ಏಕದಿನ ಪಂದ್ಯಗಳಲ್ಲಿ ನಾಯಕನಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News