ಚಿಕಿತ್ಸೆಗೆ ಕೈಚಾಚಿದ ವಿಶ್ವ ಕ್ರೀಡಾಪಟು

Update: 2018-09-03 16:31 GMT

ಬೆಂಗಳೂರು, ಸೆ.3: ಸಣ್ಣ ವಯಸ್ಸಿನಲ್ಲೇ ಅಂತರ್‌ರಾಷ್ಟ್ರೀಯ ಟೂರ್ನಿಗಳಲ್ಲಿ ಪದಕಗಳನ್ನು ಗೆದ್ದು ಹೆಸರು ಗಳಿಸಿದ್ದ ಟೆಕ್ವಾಂಡೊ ಪಟು ಲವಣ್ ‘ಕ್ರೋನ್’ ಎಂಬ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದು, ಚಿಕಿತ್ಸೆಗಾಗಿ ಹಣದ ನೆರವು ನೀಡುವಂತೆ ಪೋಷಕರು ಕೋರಿದ್ದಾರೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲವಣ್ ತಂದೆ ಉದಯ್‌ ಕುಮಾರ್, '5ನೇ ವಯಸ್ಸಿನಲ್ಲಿ ಟೆಕ್ವಾಂಡೊ ಅಭ್ಯಾಸ ಮಾಡ ತೊಡಗಿದ್ದ ಲವಣ್, ಕೇವಲ 3 ವರ್ಷಗಳಲ್ಲಿ ವಿಶ್ವಮಟ್ಟದ ವಿವಿಧ ಚಾಂಪಿಯನ್ ಷಿಪ್‌ಗಳ ಸಬ್ ಜೂನಿಯರ್ ವಿಭಾಗದಲ್ಲಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದ. ಆದರೆ, ಇದೀಗ ಏಕಾಏಕಿ ಮಾರಣಾಂತಿಕ ಕಾಯಿಲೆ ಕ್ರೋನ್‌ನಿಂದ (ಕರುಳಿನಲ್ಲಿ ಆಗುವ ಹುಣ್ಣು) ಬಳಲುತ್ತಿದ್ದಾನೆ. ಸೂಕ್ತ ಚಿಕಿತ್ಸೆ ನೀಡಲು ಹಣದ ಕೊರೆತೆ ಉಂಟಾಗಿದೆ ಎಂದು ಕಣ್ಣೀರು ಹಾಕಿದರು.

ಪ್ರತಿ ವಾರ ಚುಚ್ಚು ಮದ್ದಿಗೆ 41 ಸಾವಿರ ರೂ. ಖರ್ಚು ಆಗುತ್ತಿದ್ದು, ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿರುವುದಲ್ಲದೆ, ಲಕ್ಷಾಂತರ ರೂ. ಕೈಸಾಲ ಮಾಡಿಕೊಡಲಾಗಿದೆ. ಕೆಲವುದಿನ ಚಿಕಿತ್ಸೆ ನೀಡಿದರೆ, ಕಾಯಿಲೆಯಿಂದ ಪಾರಾಗಬಹುದು ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಉದಯ್‌ಕುಮಾರ್ ನುಡಿದರು.

ರಾಜ್ಯ ಸರಕಾರ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದ ಅವರು, ಆರ್ಥಿಕ ನೆರವು ಒದಗಿಸುವ ದಾನಿಗಳು ಉದಯಕುಮಾರ್ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಬಹುದಾಗಿದೆ.

ಬ್ಯಾಂಕ್ ಆಫ್ ಇಂಡಿಯಾ, ರಿಚ್‌ಮಂಡ್ ಟೌನ್, ಖಾತೆ ಸಂಖ್ಯೆ: 840910110008107. ಐಎಫ್‌ಎಸ್‌ಸಿ ಕೋಡ್: (BKID0008409) ಎಂಐಸಿಆರ್ ಕೋಡ್: 560013009ಗೆ ರವಾನಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 95355 32093 ಅನ್ನು ಸಂಪರ್ಕಿಸಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News