ಫಿಫಾ ವರ್ಷದ ಆಟಗಾರ ಪ್ರಶಸ್ತಿ: ರೊನಾಲ್ಡೊ, ಸಲಾಹ್, ಮಾಡ್ರಿಕ್ ನಾಮನಿರ್ದೇಶನ

Update: 2018-09-04 11:09 GMT

ಲಂಡನ್, ಸೆ.3: ಫಿಫಾ ವರ್ಷದ ಶ್ರೇಷ್ಠ ಆಟಗಾರರ ಪ್ರಶಸ್ತಿ ಪಟ್ಟಿಗೆ ರಿಯಲ್ ಮ್ಯಾಡ್ರಿಡ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ, ಅವರ ತಂಡದ ಸಹ ಆಟಗಾರರಾದ ಲುಕಾ ಮಾಡ್ರಿಕ್ ಮತ್ತು ಈಜಿಪ್ಟ್‌ನ ಮುಹಮ್ಮದ್ ಸಲಾಹ್ ನಾಮನಿರ್ದೇಶನಗೊಂಡಿದ್ದಾರೆ.

ರೊನಾಲ್ಡೊ ಈ ಬಾರಿ ಸಹ ಆಟಗಾರರಿಂದ ಪ್ರಶಸ್ತಿಗಾಗಿ ಪೈಪೋಟಿಯನ್ನು ಎದುರಿಸುವಂತಾಗಿದೆ.

ಮಾಡ್ರಿಕ್ ಕಳೆದ ವಿಶ್ವಕಪ್‌ನಲ್ಲಿ ಗೋಲ್ಡನ್ ಬಾಲ್ ಜಯಿಸಿದವರು. ಕ್ರೋಯೆಶಿಯಾ ತಂಡವನ್ನು ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಚಾಂಪಿಯನ್ಸ್ ಲೀಗ್‌ನಲ್ಲಿ ಸಲಾಹ್ ಲಿವರ್‌ಪೂಲ್ ತಂಡದಲ್ಲಿ 44 ಗೋಲುಗಳನ್ನು ದಾಖಲಿಸಿದ್ದರು.

►ಡೆಶ್ಚಾಂಪ್ಸ್,ಡಾಲಿಕ್ ಝೈದಾನ್ ಶೇಷ್ಠ ಕೋಚ್ ಪಟ್ಟಿಯಲ್ಲಿ: ವಿಶ್ವ ಚಾಂಪಿಯನ್ ಫ್ರಾನ್ಸ್ ತಂಡದ ಕೋಚ್ ಡಿಡಿಯರ್ ಡೆಶ್ಚಾಂಪ್ಸ್, ಝ್ಲ್‌ಟ್ಕೊ ಡಾಲಿಕ್ ಮತ್ತು ಝೈನುದ್ದೀನ್ ಝೈದಾನ್ ಫಿಫಾ ಶ್ರೇಷ್ಠ ಕೋಚ್‌ಗಳ ಆಯ್ಕೆಯ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಕೊಂಡಿದ್ದಾರೆ.

 ಡೆಶ್ಚಾಂಪ್ಸ್ ಅವರು ಆಟಗಾರ ಮತ್ತು ಕೋಚ್ ಆಗಿ ವಿಶ್ವಕಪ್ ಜಯಿಸಿದ 3ನೇ ವ್ಯಕ್ತಿ. ಡಾಲಿಕ್ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದ ಕ್ರೊಯೇಶಿಯಾ ತಂಡದ ಕೋಚ್.

 ಝೈನುದ್ದೀನ್ ಝೈದಾನ್ 1998ರಲ್ಲಿ ಫ್ರಾನ್ಸ್ ವಿಶ್ವಕಪ್ ಜಯಿಸಿದಾಗ ಡೆಶ್ಚಾಂಪ್ಸ್ ಅವರ ಫ್ರಾನ್ಸ್ ತಂಡದ ಸಹ ಆಟಗಾರರಾಗಿದ್ದರು. ಕಳೆದ ಜೂನ್‌ನಲ್ಲಿ ಕೋಚ್ ಹುದ್ದೆಯಿಂದ ನಿರ್ಗಮಿಸುವ ಮೊದಲು ಝೈದಾನ್ ಎರಡೂವರೆ ವರ್ಷಗಳ ಅವಧಿಯಲ್ಲಿ ಮೂರನೇ ಬಾರಿ ಚಾಂಪಿಯನ್ಸ್ ಲೀಗ್‌ನಲ್ಲಿ ರಿಯಲ್ ಮ್ಯಾಡ್ರಿಡ್‌ಗೆ ಮಾರ್ಗದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News