ಬಿಜೆಪಿಯದ್ದು ಫ್ಯಾಶಿಸ್ಟ್ ಸರಕಾರ, ನನ್ನನ್ನು ಕೂಡ ಬಂಧಿಸಬಹುದು: ಸ್ಟಾಲಿನ್

Update: 2018-09-04 10:06 GMT

ಚೆನ್ನೈ, ಸೆ. 4: ಬಿಜೆಪಿಯ ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿನಿಯ ಬಂಧನವನ್ನು ವಿರೋಧಿಸಿ ಎಲ್ಲೆಡೆ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ವೇಳೆ ಈ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಬಿಜೆಪಿ ಸರಕಾರ ಪ್ರಜಾಪ್ರಭುತ್ವ ವಿರೋಧಿಯಾಗಿ ಮುಂದುವರಿಯುತ್ತಿದೆ. ಬಿಜೆಪಿಯದ್ದು ಫ್ಯಾಶಿಸ್ಟ್ ಸರಕಾರವಾಗಿದೆ. ಅದು ನನ್ನನ್ನು ಕೂಡಾ ಬಂಧಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಸರಕಾರದಿಂದಾಗಿರುವ ದಾಳಿ ಇದು. ಸರಕಾರದ ವಿರುದ್ಧ ಘೋಷಣೆ ಕೂಗಿದ ಎಲ್ಲರನ್ನೂ ಬಂಧಿಸುವಿರಾ? ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

ಬಿಜೆಪಿ ಸರಕಾರದ ವಿರುದ್ಧ ವಿಮಾನದಲ್ಲಿ ಘೋಷಣೆ ಕೂಗಿದ್ದಕ್ಕಾಗಿ ಕೆನಡದ ಮಾಂಟ್ರಿಯಲ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿ ಸೋಫಿಯಾರನ್ನು ಬಂಧಿಸಲಾಗಿತ್ತು. “ಫ್ಯಾಶಿಸಂ ನಾಶವಾಗಲಿ” ಎಂದು ಘೋಷಣೆ ಕೂಗಿದ್ದಕ್ಕಾಗಿ ವಿದ್ಯಾರ್ಥಿನಿಯನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News