ಕೊಲ್ಕತ್ತಾದಲ್ಲಿ ಕುಸಿದ ಫ್ಲೈ ಓವರ್ ; ಓರ್ವ ಸಾವು

Update: 2018-09-04 12:15 GMT

ಕೊಲ್ಕತ್ತಾ, ಸೆ.4: ಪಶ್ಚಿಮ ಬಂಗಾಳದ ಕೊಲ್ಕತ್ತಾದ ತಾರಾತಲ ಬಳಿಯ  ಮಜೇರ್ ಹಾಟ್ ನಲ್ಲಿ ಮೇಲ್ಸೇತುವೆ ಮಂಗಳವಾರ ಮಧ್ಯಾಹ್ನ ಕುಸಿದು ಬಿದ್ದ  ಪರಿಣಾಮವಾಗಿ ಮೇಲ್ಸೇತುವೆಯ ಅವಶೇಷಗಳಡಿ ಸಿಲುಕಿಕೊಂಡು ಓರ್ವ  ಮೃತಪಟ್ಟು, 9 ಮಂದಿ ಗಂಭೀರ   ಗಾಯಗೊಂಡ ಘಟನೆ ವರದಿಯಾಗಿದೆ.

ಮೇಲ್ಸೇತುವೆಯ ಆವಶೇಷಗಳಡಿ ಹಲವು ಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  3 ವಾಹನಗಳು ಅವಘಡದಲ್ಲಿ ಜಖಂಗೊಂಡಿವೆ. ಅಗ್ನಿ ಶಾಮಕ ದಳ, ಎನ್ ಡಿ ಆರ್ ಎಫ್  ಸಿಬ್ಬಂದಿಗಳಿಂದ ರಕ್ಷಣಾ   ಕಾರ್ಯಾಚರಣೆ ಮುಂದುವರಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News