ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬಂಧಿತರಿಗೆ ಜೈಕಾರ ಹಾಕಿದ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು

Update: 2018-09-05 12:36 GMT

ಬೆಂಗಳೂರು, ಸೆ.5: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸನಾತನ ಸಂಸ್ಥೆಗೆ ಕೆಟ್ಟ ಹೆಸರು ತರಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಹಿಂದೂ ಜನ ಜನಾಗೃತಿ ಸಮಿತಿ ಸದಸ್ಯರು, ಬಂಧಿತರಾಗಿರುವ ಪರಶುರಾಮ್ ವಾಗ್ಮೋರೆ ಸೇರಿ ಹಲವರಿಗೆ ಜೈಕಾರ ಹಾಕಿದರು.

ಬುಧವಾರ ನಗರದ ಬನ್ನಪ್ಪಪಾರ್ಕ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಹಿಂದೂ ಜನ ಜಾಗೃತಿ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಸದಸ್ಯರು, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಅಮೋಲ್ ಕಾಳೆ, ಮನೋಹರ್ ಯಡವೆ, ಪರಶುರಾಮ್ ವಾಗ್ಮೋರೆ, ಕೆ.ಟಿ.ನವೀನ್ ಯಾನೆ ಹೊಟ್ಟೆ ಮಂಜ ಸೇರಿ ಪ್ರಮುಖರ ಪರವಾಗಿ ಜೈಕಾರ ಎಂದು ಘೋಷಣೆ ಕೂಗಿ ರಸ್ತೆಯುದ್ದಕ್ಕೂ ಸಾಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಮೋಹನ್‌ಗೌಡ, ಬಂಧಿತರಿಗೆ ಹಿಂಸೆ ನೀಡಿರುವ ಎಸ್‌ಐಟಿ ಪೊಲೀಸರು ತಮಗೆ ಬೇಕಾದ ಹಾಗೆ ಹೇಳಿಕೆಗಳನ್ನು ಬರೆಯಿಸಿಕೊಂಡಿದ್ದಾರೆ. ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.

ಬಂಧಿತ 14 ಮಂದಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಆದರೆ ಅವರಲ್ಲಿ ಒಬ್ಬರೂ ಸನಾತನ ಅಥವಾ ಹಿಂದೂ ಜನ ಜಾಗೃತಿ ಸಮಿತಿ ಸದಸ್ಯರಲ್ಲ. ಆದರೂ, ಈ ಸಂಘಟನೆಗಳ ಹೆಸರು ಎಳೆದು ತರಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News