ಕಾಬೂಲ್: ಅವಳಿ ಬಾಂಬ್‌ಸ್ಫೋಟಕ್ಕೆ ಕನಿಷ್ಠ 20 ಮಂದಿ ಬಲಿ

Update: 2018-09-06 05:18 GMT

 ಕಾಬೂಲ್, ಸೆ.6: ಅಫ್ಘಾನಿಸ್ತಾನ ರಾಜಧಾನಿಯ ಸ್ಫೋರ್ಟ್ಸ್ ಕ್ಲಬ್‌ನಲ್ಲಿ ಬುಧವಾರ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, 70ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಮೊದಲು ಆತ್ಮಾಹುತಿ ದಾಳಿ ನಡೆದು ಹಲವು ಮಂದಿ ಸಾವನ್ನಪ್ಪಿದ್ದರು. ಮೊದಲ ಬಾಂಬ್‌ಸ್ಫೋಟದಲ್ಲಿ ಗಾಯಗೊಂಡವರನ್ನು ಸಾಗಿಸುತ್ತಿದ್ದ ಕಾರಿನಲ್ಲಿ ಮತ್ತೊಂದು ಬಾಂಬ್ ಸ್ಫೋಟಗೊಂಡ ಕಾರಣ ಅಪಾರ ಸಾವು-ನೋವು ಸಂಭವಿಸಿದೆ.

ಸಾವನ್ನಪ್ಪಿದವರ ಪೈಕಿ ಓರ್ವ ಪತ್ರಕರ್ತ ಹಾಗೂ ಕ್ಯಾಮರಾಮ್ಯಾನ್ ಕೂಡ ಸೇರಿದ್ದಾನೆ. ಈ ಘಟನೆಯ ಬಗ್ಗೆ ಯಾವ ಸಂಘಟನೆಗಳು ಹೊಣೆಹೊತ್ತುಕೊಂಡಿಲ್ಲ.

ಬಾಂಬ್ ದಾಳಿಯನ್ನು ಖಂಡಿಸಿರುವ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ,‘‘ ಈ ದಾಳಿಯು ನಾಗರಿಕರು ಹಾಗೂ ಮಾಧ್ಯಮದವರ ವಾಕ್ ಸ್ವಾತಂತ್ರ ಮೇಲಿನ ದಾಳಿಯಾಗಿದೆ. ಇದು ಮಾನವೀಯತೆ ವಿರುದ್ಧ ಅಪರಾಧವಾಗಿದೆ'' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News