ಯುಎಸ್ ಓಪನ್: ಜಪಾನ್ ಟೆನಿಸ್ ತಾರೆಯರ ಅಪರೂಪದ ಸಾಧನೆ

Update: 2018-09-06 07:25 GMT

 ನ್ಯೂಯಾರ್ಕ್, ಸೆ.6: ಒಂದೇ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಜಪಾನ್‌ನ ಪುರುಷ ಹಾಗೂ ಮಹಿಳಾ ಟೆನಿಸ್ ತಾರೆಯರು ಸೆಮಿ ಫೈನಲ್‌ಗೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಕೀ ನಿಶಿಕೊರಿ ಹಾಗೂ ನೊಯೊಮಿ ಒಸಾಕಾ ಯುಎಸ್ ಓಪನ್‌ನ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ನಿಶಿಕೊರಿ ಕ್ವಾರ್ಟರ್ ಫೈನಲ್‌ನಲ್ಲಿ ಮರಿನ್ ಸಿಲಿಕ್‌ರನ್ನು 2-6, 6-4, 7-6(7/5),4-6, 6-4 ಅಂತರದಿಂದ ಮಣಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನ ಅಂತಿಮ-8ರ ಹಂತದ ಪಂದ್ಯದಲ್ಲಿ ಒಸಾಕಾ ಉಕ್ರೇನ್‌ನ ಲೆಸಿಯಾ ಸುರೆಂಕೊರನ್ನು 6-1, 6-1 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

2014 ಹಾಗೂ 2016ರ ಬಳಿಕ ನಿಶಿಕೊರಿ ಮೂರನೇ ಬಾರಿ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News