ನೋಟ್ ಬ್ಯಾನ್ ದೊಡ್ಡ ದುರಂತ, 2000 ರೂ. ನೋಟನ್ನು ನಿಷೇಧಿಸಿ: ಚಂದ್ರಬಾಬು ನಾಯ್ಡು

Update: 2018-09-06 08:13 GMT

ಅಮರಾವತಿ, ಸೆ.6: ನೋಟು ಅಮಾನ್ಯೀಕರಣ ಒಂದು ದೊಡ್ಡ ‘ದುರಂತ' ಎಂದು ಬಣ್ಣಿಸಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಕೇಂದ್ರ ಸರಕಾರ ರೂ 2000 ನೋಟುಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.

ಪಕ್ಷದ ಕಾರ್ಯಕರ್ತರ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಡಿಜಿಟಲ್ ಕರೆನ್ಸಿಯು ನೋಟು ರೂಪದಲ್ಲಿರುವ ಕರೆನ್ಸಿಗಿಂತ ಹೆಚ್ಚು ಅಗ್ಗವಾದರೂ ಸರಕಾರ ಅದನ್ನು ಸರಿಯಾಗಿ ಕಾರ್ಯಗತಗೊಳಿಸಿಲ್ಲ ಎಂದರು.

ರಾಜ್ಯದ ರಾಜಧಾನಿ ಅಮರಾವತಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ ಅವರು, ನಗರ ನಿರ್ಮಿಸುವ ಕಾರ್ಯ ವೇಗದಿಂದ ನಡೆಯುತ್ತಿದ್ದು, ಹೈಕೋರ್ಟ್ ಕಟ್ಟಡಗಳು ಈ ವರ್ಷ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು. ಆದರೆ ಕೇಂದ್ರ  ಸಾಕಷ್ಟು ಹಣಕಾಸು ಒದಗಿಸದೆ ಅಡ್ಡಿ ಸೃಷ್ಟಿಸುತ್ತಿದೆ ಎಂದು ಅವರು ದೂರಿದರು.

ಆಂಧ್ರಕ್ಕೆ ವಿಶೇಷ ಸ್ಥಾನಮಾನ ಕೂಡ ನೀಡದೆ ಕೇಂದ್ರ ಸಮಸ್ಯೆಯುಂಟು ಮಾಡುತ್ತಿದೆ ಎಂದೂ ನಾಯ್ಡು ಆರೋಪಿಸಿದರು. ರಾಜ್ಯದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 10 ಲಕ್ಷ  ಕೆರೆಗಳನ್ನು ನಿರ್ಮಿಸಲಾಗಿದೆ.  ಹತ್ತು ನೀರಾವರಿ ಯೋಜನೆಗಳೂ ಪೂರ್ಣಗೊಂಡಿದ್ದು, ಇನ್ನೂ 10-16 ಯೋಜನೆಗಳು ಜಾರಿಗೊಳ್ಳಲಿವೆ. ಕೃಷಿ, ತೋಟಗಾರಿಕೆ ಮತ್ತು ಮತ್ಸ್ಯಕೃಷಿಗೆ ನಾವು ಆದ್ಯತೆ ನೀಡುತ್ತಿದ್ದೇವೆ ಎಮದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News