ಜಮ್ಮು -ಕಾಶ್ಮೀರದ ಡಿಜಿಪಿ ವೈದ್ ಎತ್ತಂಗಡಿ

Update: 2018-09-07 05:29 GMT

ಶ್ರೀನಗರ, ಸೆ.7: ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕರ ಹುದ್ದೆಯಿಂದ ಶೇಷ್ ಪಾಲ್  ವೈದ್  ಅವರನ್ನು ದಿಢೀರನೆ ವರ್ಗಾಯಿಸಲಾಗಿದೆ.

ಎಸ್ ಪಿ ವೈದ್  ಅವರನ್ನು  ಜಮ್ಮು ಮತ್ತು ಕಾಶ್ಮೀರದ ಸಾರಿಗೆ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ಕಾರಾಗೃಹ  ಇಲಾಖೆಯ ಡಿಜಿಪಿ ದಿಲ್ಬಾಗ್ ಸಿಂಗ್  ಅವರಿಗೆ   ತೆರವಾಗಿರುವ ಡಿಜಿಪಿ ಹುದ್ದೆಯ ಪ್ರಭಾರ  ನೀಡಲಾಗಿದೆ.

1986ರ ಐಪಿಎಸ್ ಬ್ಯಾಚ್ ನ  ಎಸ್ ಪಿ ವೈದ್  ಅವರು 2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕಗೊಂಡಿದ್ದರು.  ಮುಂದಿನ ವರ್ಷದ ಅಕ್ಟೋಬರ್ ನಲ್ಲಿ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News