ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ಸೇರಿ ಮೂವರು ಮೃತ್ಯು

Update: 2018-09-07 17:41 GMT

ಓಹಿಯೊ (ಅಮೆರಿಕ), ಸೆ. 7: ಅಮೆರಿಕದ ಓಹಿಯೊ ರಾಜ್ಯದ ಬ್ಯಾಂಕೊಂದರಲ್ಲಿ ಗುರುವಾರ ನಡೆದ ಗುಂಡಿನ ಹಾರಾಟದಲ್ಲಿ ಮೂವರು ಮೃತಪಟ್ಟಿದ್ದು, ಓರ್ವ ಭಾರತೀಯರಾಗಿದ್ದಾರೆ.

 ಉಮರ್ ಪೆರೆಝ್ ಎಂಬ ಬಂದೂಕುಧಾರಿಯು ನಡೆಸಿದ ಗುಂಡಿನ ದಾಳಿಯಲ್ಲಿ ಆಂಧ್ರಪ್ರದೇಶದ 25 ವರ್ಷದ ಪೃಥ್ವಿರಾಜ್ ಕಂಡೇಪಿ ಮೃತಪಟ್ಟಿದ್ದಾರೆ. 48 ವರ್ಷದ ಲೂಯಿಸ್ ಫಿಲಿಪ್ ಕಾಲ್ಡರಾನ್ ಮತ್ತು 64 ವರ್ಷ ರಿಚರ್ಡ್ ನ್ಯೂಕಮರ್ ಮೃತಪಟ್ಟ ಇತರರು.

ಬಳಿಕ ಪೊಲೀಸರು 29 ವರ್ಷದ ಬಂದೂಕುಧಾರಿಯನ್ನು ಗುಂಡಿಟ್ಟು ಕೊಂದರು.

ಇತರ ಐವರು ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಸಿನ್ಸಿನಾಟಿಯ ಫೌಂಟನ್ ಚೌಕದಲ್ಲಿರುವ ಬ್ಯಾಂಕ್‌ನಲ್ಲಿ ಪೃಥ್ವಿರಾಜ್ ಸಲಹಾಕಾರನಾಗಿ ಕೆಲಸ ಮಾಡುತ್ತಿದ್ದರು.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಪಟ್ಟಣದಲ್ಲಿ ಅವರ ಕುಟುಂಬ ವಾಸಿಸುತ್ತಿದೆ.

ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು ಪೃಥ್ವಿರಾಜ್ ಕುಟುಂಬವನ್ನು ಸಂಪರ್ಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News